ನಿಮ್ಮ ಕೂದಲು ಕಿತ್ತು ಬರುತ್ತಿದೆಯೇ? ಇದನ್ನು ಕೂದಲು ಉದುರುವುದು ಎಂದು ತಪ್ಪಾಗಿ ತಿಳಿದುಕೊಳ್ಳದಿರಿ. ನಿತ್ಯ ತಲೆಯಿಂದ ಕೂದಲು ಉದುರುವುದು ಸಹಜ ಎಂದಿವೆ ಸಂಶೋಧನೆಗಳು.
ನಮ್ಮ ತಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಕೂದಲು ಇರುತ್ತವೆ. ಪ್ರತಿನಿತ್ಯ 50ರಿಂದ 100 ಕೂದಲು ಉದುರಿಸಿಕೊಳ್ಳುವುದು ಸಾಮಾನ್ಯ ಎನ್ನುತ್ತವೆ ಸಂಶೋಧನೆಗಳು. ಇಷ್ಟೇ ಕೂದಲು ಉದುರಿದರೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಇವು ಮತ್ತೆ ಹುಟ್ಟುತ್ತವೆ. ಅದರಿಂದಲೂ ಹೆಚ್ಚು ಉದುರಿದಾಗ ಮಾತ್ರ ತಲೆಕೆಡಿಸಿಕೊಂಡರೆ ಸಾಕು.
ಸಾಮಾನ್ಯವಾಗಿ ಒತ್ತಡ ಹಾಗೂ ಹಾರ್ಮೋನ್ ಸಮಸ್ಯೆಯಿಂದ ಇಲ್ಲವೇ ಪೌಷ್ಟಿಕಾಂಶಗಳ ಕೊರತೆಯಿಂದ ಕೂದಲು ಉದುರುತ್ತದೆ. ಅವುಗಳನ್ನು ಆಹಾರದ ರೂಪದಲ್ಲಿ ಸೇವಿಸಿದರೆ ಕೂದಲು ಉದುರುವ ಸಮಸ್ಯೆ ದೂರವಾಗುತ್ತದೆ.
ಉದುರುವಿಕೆಯಿಂದ ಹೆಚ್ಚಾಗಿ ಕೂದಲು ಗುಂಪುಗುಂಪಾಗಿ ಕಿತ್ತು ಬರಲು ಆರಂಭಿಸಿದರೆ ನೀವು ಬಳಸುವ ಎಣ್ಣೆ ಇಲ್ಲವೇ ಶ್ಯಾಂಪುವಿನಲ್ಲಿ ಸಮಸ್ಯೆ ಇದೆ ಎಂದರ್ಥ. ಆಗ ಶ್ಯಾಂಪು ಬದಲಾಯಿಸಿ ಇಲ್ಲವೇ ವೈದ್ಯರನ್ನು ಸಂಪರ್ಕಿಸಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ.