ಬುದ್ಧಿಗೆ ಗುದ್ದು ನೀಡುವ ಹಲವಾರು ರೀತಿಯ ಆಟಗಳು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಸಿದ್ಧಿಯಾಗಿವೆ. ಅವುಗಳಲ್ಲಿ ಒಂದು ಆಪ್ಟಿಕಲ್ ಇಲ್ಯೂಷನ್.
ಅಂಥದ್ದೇ ಒಂದು ಫೋಟೋ ನೆಟ್ಟಿಗರಿಗೆ ಚಾಲೆಂಜ್ ಕೊಟ್ಟಿದೆ. ಈ ಚಿತ್ರ ಭಾರಿ ವೈರಲ್ ಆಗುತ್ತಿದ್ದು, ಜನರ ತಲೆ ಕೆಡಿಸುವಂತಿದೆ.
ಇದೊಂದು ಒಗಟು ಆಗಿದ್ದು, ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ ಕಾಲಿನ ಹಿಮ್ಮಡಿ ಮತ್ತು ಪ್ಯಾಂಟ್ ಧರಿಸಿರುವ ಕಾಲಿನ ಚಿತ್ರಗಳಿವೆ. ನಿಮಗೆ ಈ ಚಿತ್ರದಲ್ಲಿ ಏನು ಕಾಣಿಸುತ್ತಿದೆ ಎನ್ನುವುದರ ಆಧಾರದ ಮೇಲೆ ನಿಮ್ಮ ಮನಸ್ಥಿತಿಯನ್ನು ಪತ್ತೆ ಹಚ್ಚಬಹುದಾಗಿದೆಯಂತೆ.
ಫೋಟೋದಲ್ಲಿ ನೀವು ಮೊದಲು ಪ್ಯಾಂಟ್ ಕಾಲುಗಳನ್ನು ಗಮನಿಸಿದರೆ, ನೀವು ನೇರವಾಗಿ ಜನರೊಂದಿಗೆ ಸಂವಹನ ನಡೆಸುವವರು ಎಂದು ಅರ್ಥ. ಈ ಜನರು ಮುಕ್ತವಾಗಿರುತ್ತಾರೆ ಮತ್ತು ತಮ್ಮ ಭಾವನೆಗಳನ್ನು ಇತರರೊಂದಿಗೆ ಸುಲಭವಾಗಿ ವ್ಯಕ್ತಪಡಿಸುತ್ತಾರೆ. ಇತರ ಜನರ ಭಾವನೆಗಳಿಗೆ ಆದ್ಯತೆ ಕೊಡುತ್ತಾರೆ. ಅವರನ್ನು ಭಾವನಾತ್ಮಕವಾಗಿ ಆಳವಿಲ್ಲದ ಜನರು ಎಂದೂ ಕರೆಯುತ್ತಾರೆ.
ಹಿಮ್ಮಡಿಯ ಕಾಲುಗಳನ್ನು ನೀವು ಮೊದಲು ಗಮನಿಸಿದರೆ, ಮಾತನಾಡುವ ಮೊದಲು ಯೋಚಿಸುವ ವ್ಯಕ್ತಿ ನೀವು. ಈ ಜನರು ಮಾತನಾಡಲು ತಮ್ಮ ಸಮಯವನ್ನು ತೆಗೆದುಕೊಳ್ಳುತ್ತಾರೆ, ಏಕೆಂದರೆ ಅವರು ಎಲ್ಲದರಲ್ಲಿಯೂ ಪರ್ಫೆಕ್ಟ್ ಆಗಲು ಬಯಸಿರುತ್ತಾರೆ. ನಿಮಗೆ ಮೊದಲು ಕಂಡದ್ದು ಯಾವುದು?