
ಮೊಬೈಲ್ ಫೋನ್ ಇಲ್ಲದೇ ಬದುಕುವುದೇ ಅಸಾಧ್ಯ ಎಂಬ ಸ್ಥಿತಿಯೀಗ ನಿರ್ಮಾಣವಾಗಿದೆ. ದಿನದ 24 ಗಂಟೆಯೂ ಫೋನ್ ಬೇಕು. ಯಾವ ಕೆಲಸವೂ ಫೋನ್ ಇಲ್ಲದೆ ಆಗುವುದೇ ಇಲ್ಲ. ಮೊಬೈಲ್‌ನಲ್ಲಿ ಪ್ರತಿಯೊಂದು ಕಾರ್ಯಕ್ಕೂ ವಿಭಿನ್ನ ಅಪ್ಲಿಕೇಶನ್‌ಗಳಿವೆ. ದಿನಸಿಗೆ ಪ್ರತ್ಯೇಕ, ಆಹಾರ ವಿತರಣೆಗೆ ಪ್ರತ್ಯೇಕ, ಬ್ಯಾಂಕಿಂಗ್ ಮತ್ತು ಹಣಕಾಸು ವಹಿವಾಟುಗಳಿಗೆ ಪ್ರತ್ಯೇಕ ಹೀಗೆ ಅಪ್ಲಿಕೇಶನ್‌ಗಳ ಸರಮಾಲೆಯೇ ಲಭ್ಯವಿದೆ.
ಆದರೆ ಭಾರತದಲ್ಲಿ ಜನರು ಫೋನ್ ಅನ್ನು ಯಾವ ರೀತಿ ಬಳಸಿದ್ದಾರೆ? ಜನರು ಅತಿ ಹೆಚ್ಚು ವೀಕ್ಷಿಸಿರುವುದು ಏನನ್ನು ಅನ್ನೋ ಇಂಟ್ರೆಸ್ಟಿಂಗ್ ವರದಿಯೊಂದು ಈಗ ಹೊರಬಿದ್ದಿದೆ.
2600 ಕೋಟಿ ಆ್ಯಪ್ ಡೌನ್‌ಲೋಡ್
ಭಾರತೀಯ ಮೊಬೈಲ್ ಗ್ರಾಹಕರು ಕಳೆದ ವರ್ಷ ಜನವರಿ 1 ರಿಂದ ಡಿಸೆಂಬರ್ 30ರ ನಡುವೆ ತಮ್ಮ ಮೊಬೈಲ್ ಡಿವೈಸ್‌ಗಳಲ್ಲಿ ಒಟ್ಟು 26 ಬಿಲಿಯನ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದ್ದಾರೆ. ಈ ಸಂಖ್ಯೆಯು 2022 ರಲ್ಲಿ 28 ಶತಕೋಟಿಯಷ್ಟಿತ್ತು. 2023ರಲ್ಲಿ ಡೌನ್‌ಲೋಡ್ ಸಂಖ್ಯೆ ಶೇ.7ರಷ್ಟು ಕಡಿಮೆಯಾಗಿದೆ.
ಅಗ್ರಸ್ಥಾನದಲ್ಲಿ ಗೂಗಲ್
ಗೂಗಲ್ ಅತಿ ಹೆಚ್ಚು ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್ ಎನಿಸಿಕೊಂಡಿದೆ. 2023ರ ಜನವರಿ 1ರಿಂದ ಡಿಸೆಂಬರ್ 23ರ ನಡುವೆ Google ಅಪ್ಲಿಕೇಶನ್ ಅನ್ನು ಒಟ್ಟು 40 ಮಿಲಿಯನ್ ಬಾರಿ ಡೌನ್‌ಲೋಡ್ ಮಾಡಲಾಗಿದೆ. ಒಟ್ಟು ಡೌನ್‌ಲೋಡ್ ಸಂಖ್ಯೆ ಸುಮಾರು 450 ಮಿಲಿಯನ್.
158 ಕೋಟಿ ರೂ. ಗಳಿಸಿದ ಗೂಗಲ್ ಪ್ಲೇ ಸ್ಟೋರ್
ಭಾರತದಲ್ಲಿ ವಿವಿಧ ಆಪರೇಟಿಂಗ್ ಸಿಸ್ಟಂಗಳಲ್ಲಿ ಕಾರ್ಯನಿರ್ವಹಿಸುವ ಆಪ್ ಸ್ಟೋರ್‌ಗಳು ಗಳಿಸಿದ ಒಟ್ಟು ಆದಾಯ ಸುಮಾರು 3455 ಕೋಟಿ ರೂಪಾಯಿ. ಕಳೆದ ವರ್ಷ ಗೂಗಲ್ ಪ್ಲೇ ಸ್ಟೋರ್ ಅಂದಾಜು 158 ಕೋಟಿ ರೂಪಾಯಿ ಗಳಿಸಿದೆ. ಸಿ ಹೆಸರಿನ ಆ್ಯಪ್ ಸ್ಟೋರ್ ಅಂದಾಜು 133 ಕೋಟಿ ರೂಪಾಯಿ ಗಳಿಸಿದ್ರೆ, ಡೇಟಿಂಗ್ ಆಪ್ ಬಂಬಲ್ 91.5 ಕೋಟಿ ರೂಪಾಯಿ ಗಳಿಸಿದೆ.
ಹೆಚ್ಚು ಡೌನ್‌ಲೋಡ್ ಮಾಡಿದ ಗೇಮಿಂಗ್ ಅಪ್ಲಿಕೇಶನ್‌ಗಳು
930 ಕೋಟಿ ಡೌನ್‌ಲೋಡ್‌ಗಳೊಂದಿಗೆ ವಿವಿಧ ವರ್ಗಗಳ ಅಪ್ಲಿಕೇಶನ್‌ಗಳಲ್ಲಿ ಡೌನ್‌ಲೋಡ್ ಸಂಖ್ಯೆಗಳ ವಿಷಯದಲ್ಲಿ ಗೇಮಿಂಗ್ ಮುಂಚೂಣಿಯಲ್ಲಿದೆ. ಇದರ ನಂತರದ ಸ್ಥಾನದಲ್ಲಿ ಸೋಶಿಯಲ್ ಕ್ಲಾಸ್, ಫೋಟೋ-ವಿಡಿಯೋ, ಹಣಕಾಸು, ಮನರಂಜನೆ, ಶಾಪಿಂಗ್, ವ್ಯಾಪಾರ, ಶಿಕ್ಷಣ, ಲೈಫ್‌ಸ್ಟೈಲ್ ಆ್ಯಪ್‌ಗಳು ಇವೆ.