ನವೆಂಬರ್ 8, 2016. ಯಾರಿಗೆ ನೆನಪಿಲ್ಲ. ಅಂದು ಪ್ರಧಾನಿ ನರೇಂದ್ರ ಮೋದಿ, ನೋಟು ನಿಷೇದದ ಘೋಷಣೆ ಮಾಡಿದ್ದರು. ಇಡೀ ದೇಶವೇ ಈ ಸುದ್ದಿ ಕೇಳಿ ದಂಗಾಗಿತ್ತು. 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಬ್ಯಾಂಕ್ ವಾಪಸ್ ಪಡೆದು, ಬೇರೆ ನೋಟುಗಳನ್ನು ನೀಡಿತ್ತು. ನೋಟು ನಿಷೇಧವಾಗಿ 5 ವರ್ಷ ಕಳೆದಿದೆ. ಈ ನೋಟುಗಳನ್ನು ಏನು ಮಾಡಲಾಗಿದೆ ಎಂಬ ಪ್ರಶ್ನೆ ಏಳುತ್ತದೆ.
ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ 15 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ಹಳೆಯ ನೋಟುಗಳು ಜಮಾ ಆಗಿದ್ದವು. ಈ ನೋಟುಗಳನ್ನು ಈಗ್ಲೂ ಬಳಸಲಾಗ್ತಿಲ್ಲ. ಅಮಾನ್ಯಗೊಂಡ ಈ ನೋಟುಗಳನ್ನು ಇತರ ಸರಕುಗಳನ್ನು ತಯಾರಿಸಲು ಬಳಸಲಾಗುತ್ತದೆ.
ಆರ್‌ಬಿಐ ನಿಯಮಗಳ ಪ್ರಕಾರ, ಅಮಾನ್ಯಗೊಂಡ ನೋಟುಗಳನ್ನು ಕರೆನ್ಸಿ ವೆರಿಫಿಕೇಶನ್ ಪ್ರೊಸೆಸಿಂಗ್ ಸಿಸ್ಟಮ್ ಅಡಿಯಲ್ಲಿ ವಿಂಗಡಿಸಲಾಗುತ್ತದೆ. ವಿವಿಧ ಭಾಗಗಳಾಗಿ ವಿಂಗಡಿಸಿದ ನಂತ್ರ ಅವುಗಳನ್ನು ಮರುಬಳಕೆ ಮಾಡಲಾಗುತ್ತದೆ.
ನೋಟುಗಳಿಂದ, ಕಾರ್ಡ್‌ಬೋರ್ಡ್ ಸೇರಿದಂತೆ ಹಲವು ರೀತಿಯ ವಸ್ತುಗಳನ್ನು ತಯಾರಿಸಲಾಗುತ್ತದೆ. ಅಹಮದಾಬಾದ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ವಿದ್ಯಾರ್ಥಿಗಳು, 500 ಮತ್ತು 1000 ರ ಹಳೆಯ ನೋಟುಗಳಿಂದ ಅನೇಕ ವಸ್ತುಗಳನ್ನು ತಯಾರಿಸಿದ್ದರು. ಆರ್‌ಬಿಐ ಈ ಕೆಲಸಕ್ಕಾಗಿ ಎನ್‌ಐಡಿಯಿಂದ ಸಹಾಯವನ್ನು ಕೋರಿತ್ತು. ನಂತರ ವಿದ್ಯಾರ್ಥಿಗಳು ದಿಂಬು, ಟೇಬಲ್ ಲ್ಯಾಂಪ್ ಸೇರಿದಂತೆ ಅನೇಕ ವಸ್ತುಗಳನ್ನು ತಯಾರಿಸಿದ್ದರು. ಹಳೆ ನೋಟುಗಳು ಬಣ್ಣ ಬಿಡುವುದಿಲ್ಲ. ಹಾಗೆ ಅದು ನೀರಿನಲ್ಲಿ ಕರಗುವುದಿಲ್ಲ. ಹಾಗಾಗಿ ಅದನ್ನು ಬೇರೆ ವಸ್ತುಗಳ ತಯಾರಿಗೆ ಬಳಸಲಾಗುತ್ತದೆ.