![](https://kannadadunia.com/wp-content/uploads/2022/09/33272-0-seven-facts-about-karn.jpg)
ಹಿರಿಯರಿಗೆ ನಮನ ಸಲ್ಲಿಸಲು ಕುಟುಂಬ ಸದಸ್ಯರು ಪಿತೃ ಪಕ್ಷವನ್ನು ಆಚರಿಸುತ್ತಾರೆ. ಸಾವನ್ನಪ್ಪಿದ ಕುಟುಂಬದ ಹಿರಿಯರಿಗೆ ಶ್ರದ್ದಾಂಜಲಿ ಸಲ್ಲಿಸುವ ಸಲುವಾಗಿ ಅವರಿಗಿಷ್ಟವಾದ ಆಹಾರ ಪದಾರ್ಥಗಳನ್ನಿಟ್ಟು ಪೂಜಿಸಲಾಗುತ್ತದೆ.
ಆದರೆ ಅನಾದಿ ಕಾಲದಿಂದಲೂ ಪಿತೃಪಕ್ಷದ ಪರಂಪರೆ ನಡೆದುಕೊಂಡು ಬಂದಿದೆ. ಮಹಾಭಾರತದಲ್ಲಿ ತನ್ನ ಕರ್ಣಕುಂಡಲವನ್ನು ಕೊಟ್ಟು ಮರಣವನ್ನಪ್ಪಿದ ಕರ್ಣ, ಸ್ವರ್ಗ ಲೋಕಕ್ಕೆ ಹೋದ ವೇಳೆ ಆಹಾರವಾಗಿ ವಜ್ರ, ವೈಢೂರ್ಯಗಳನ್ನು ನೀಡಲಾಗುತ್ತದೆ.
ಆಗ ಕರ್ಣ ಈ ಕುರಿತು ಪ್ರಶ್ನಿಸಿದಾಗ, ಹಿರಿಯರಿಗೆ ಶ್ರಾದ್ದ ಮಾಡದ ಹಿನ್ನಲೆಯಲ್ಲಿ ಕರ್ಣ ಮಾಡಿದ ದಾನಕ್ಕೆ ಅನುಸಾರವಾಗಿ ಇದನ್ನು ನೀಡಲಾಗುತ್ತದೆ ಎನ್ನಲಾಗುತ್ತದೆ. ಆಗ ಸ್ವರ್ಗ ಲೋಕದ ಅಧಿಪತಿ ಇಂದ್ರನ ಅನುಮತಿ ಪಡೆದು ಬರುವ ಕರ್ಣ, ಹಿರಿಯರಿಗೆ ಶ್ರಾದ್ದ ಮಾಡಿದನೆಂಬ ಪ್ರತೀತಿ ಇದೆ. ಹೀಗಾಗಿ ಈ ಮಾಸದಲ್ಲಿ ಗತಿಸಿದ ಹಿರಿಯರಿಗೆ ನಮನ ಸಲ್ಲಿಸುವ ಮೂಲಕ ಅವರ ಆತ್ಮಕ್ಕೆ ಸದ್ಗತಿ ಸಿಗುತ್ತದೆ ಎಂಬ ನಂಬಿಕೆ ಪ್ರಚಲಿತದಲ್ಲಿದೆ. ಇದರಿಂದ ಕುಟಂಬಕ್ಕೆ ಒಳಿತಾಗುತ್ತದೆಂಬ ಗಾಢ ನಂಬಿಕೆಯೂ ಇದೆ.