ಸದ್ಯ ಎರಡು ಕೊರೊನಾ ಅಲೆಗಳನ್ನು ಕಂಡಿರುವ ದೇಶದಲ್ಲಿ ಬಹುತೇಕರಿಗೆ ಕೊರೊನಾ ಸೋಂಕಿನಿಂದ ನಮ್ಮ ದೇಹದಲ್ಲಿನ ಶ್ವಾಸಕೋಶಕ್ಕೆ ಭಾರಿ ಪೆಟ್ಟು ಬೀಳಲಿದೆ ಎನ್ನುವುದು ಅರಿವಿಗೆ ಬಂದಿದೆ.
ಕೆಲವೊಮ್ಮೆ ಗಂಭೀರ ಸ್ಥಿತಿ ತಲುಪಿ ಉಸಿರಾಟ ಸಮಸ್ಯೆಯಿಂದ ಬಳಲುವ ರೋಗಿಗಳಲ್ಲಿ ಕಿಡ್ನಿ, ಕರುಳು, ಹೃದಯ, ಹೊಟ್ಟೆ, ನರಗಳ ಸಮಸ್ಯೆಗಳು ಕೂಡ ಉಲ್ಬಣಿಸುವ ಸಾಧ್ಯತೆ ಇರುತ್ತದೆ.
ಒಟ್ಟಿನಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಮೃತಪಡುವುದು ಹೆಚ್ಚಾಗಿ ಬಹುಅಂಗಾಂಗಗಳ ವೈಫಲ್ಯದಿಂದಲೇ ಎನ್ನುವುದು ತಿಳಿದುಬಂದಿದೆ.
ಸ್ಯಾಂಡಲ್ ವುಡ್ ಗೆ ಮತ್ತೊಂದು ಶಾಕ್: ಡೈಲಾಗ್ ರೈಟರ್ ಗುರು ಕಶ್ಯಪ್ ನಿಧನ
ಹಾಗಾದರೆ ಅಂಗಗಳು ನಿಷ್ಕ್ರಿಯಗೊಳ್ಳುವಂತೆ ಅವುಗಳನ್ನು ತೀವ್ರ ಕಾಡುವ ನಮ್ಮ ದೇಹದಲ್ಲಿನ ಅಂಶ ಯಾವುದು? ಅದು ಕೊರೊನಾ ಸೋಂಕಿಗೆ ಹೇಗೆ ಪ್ರತಿಕ್ರಿಯಿಸುತ್ತಿದೆ ಎನ್ನುವುದನ್ನು ಇತ್ತೀಚೆಗೆ ಅಮೆರಿಕದ ನ್ಯೂಯಾರ್ಕ್‌ನಲ್ಲಿ ‘ಎನ್‌ವೈಯು ಗ್ರಾಸ್‌ಮನ್ ಸ್ಕೂಲ್ ಆಫ್ ಮೆಡಿಸಿನ್ ‘ ಸಂಶೋಧಕರು ಪತ್ತೆ ಮಾಡಿದ್ದಾರೆ.
ಸೋಂಕಿತರಲ್ಲಿ ಅಂಗಾಂಗ ವೈಫಲ್ಯಕ್ಕೆ ಪ್ರಮುಖ ಕಾರಣ, ರಕ್ತದಲ್ಲಿ ಪ್ಲೇಟ್‌ಲೆಟ್ ಕಣಗಳು ಹಾಗೂ ರಕ್ತನಾಳಗಳ ಅಂಚಿನಲ್ಲಿರುವ ಜೀವಕಣಗಳ ನಡುವಿನ ಪ್ರತಿಕ್ರಿಯೆ ಪ್ರಕ್ರಿಯೆಗಳು.
ಪ್ಲೇಟ್‌ಲೆಟ್‌ಗಳು ಹೊರಡಿಸುವ ಪ್ರೊಟೀನ್ ಸಿಗ್ನಲ್‌ಗಳು ಜ್ವರ, ಉರಿಯೂತ, ರಕ್ತದ ಹೆಪ್ಪುಗಟ್ಟುವಿಕೆ, ರಕ್ತನಾಳಗಳ ಹಾನಿಗೆ ಕಾರಣವಾಗುತ್ತಿದೆ. ಕೊರೊನಾ ವೈರಾಣು ದೇಹದಲ್ಲಿ ಕಂಡ ಕೂಡಲೇ ಪ್ಲೇಟ್‌ಲೆಟ್‌ಗಳು ರಕ್ಷಣೆಯ ನೆಪದಲ್ಲಿ ಹೀಗೆ ವರ್ತಿಸುತ್ತಿವೆ ಎಂದು ಸಂಶೋಧಕರು ಪತ್ತೆ ಹಚ್ಚಿದ್ದಾರಂತೆ.
ಇದರಲ್ಲಿ ಎಸ್1000ಎ8 ಮತ್ತು ಎಸ್1000ಎ9 ಎಂಬ ಎರಡು ಜೀನ್‌ಗಳು(ವಂಶವಾಹಿ) ಕೂಡ ಕಾರಣವಾಗಿವೆ ಎಂದು ಸೈನ್ಸ್ ಅಡ್ವಾನ್ಸಸ್ ಜರ್ನಲ್‌ನಲ್ಲಿ ಪ್ರಕಟವಾಗಿರುವ ವರದಿ ಹೇಳಿದೆ.