ಜಾತಕದಲ್ಲಿ ಎರಡನೇ, ಮೂರನೇ ಹಾಗೂ ಎಂಟನೇ ಮನೆಗಳು ಮಾತಿಗೆ ಸಂಬಂಧಿಸಿದ್ದಾಗಿವೆ. ಈ ಮನೆಗಳ ಮೇಲೆ ಅಶುಭ ಗ್ರಹಗಳ ಪ್ರಭಾವ ಬಿದ್ದಲ್ಲಿ ವ್ಯಕ್ತಿ ಕೆಟ್ಟ ಶಬ್ಧಗಳ ಪ್ರಯೋಗ ಮಾಡ್ತಾನೆ. ಕೆಟ್ಟ ಶಬ್ಧವನ್ನಾಡಲು ಮುಖ್ಯ ಕಾರಣ ರಾಹು ಹಾಗೂ ಮಂಗಳ. ಶನಿ ಪ್ರಭಾವ ಹೆಚ್ಚಿದ್ದಲ್ಲಿ ವ್ಯಕ್ತಿ ಬಾಯಿಂದ ಅಪಶಬ್ಧಗಳು ಹೆಚ್ಚಾಗಿ ಬರುತ್ತವೆ. ಬುಧ ದೋಷಿಯಾಗಿದ್ದರೂ ಕೆಟ್ಟ ಶಬ್ಧಗಳು ಬಾಯಿಂದ ಬರುತ್ತವೆ.
ಕೆಟ್ಟ ಶಬ್ಧಗಳ ಬಳಕೆ ಒಳ್ಳೆಯದಲ್ಲ. ಇದು ನೇರವಾಗಿ ಆರ್ಥಿಕ ಸ್ಥಿತಿ ಮೇಲೆ ಪ್ರಭಾವ ಬೀರುತ್ತದೆ.
ವ್ಯಕ್ತಿಯ ಜೀವನದ ಹಣಕಾಸಿನ ವ್ಯವಹಾರದಲ್ಲಿ ಏರುಪೇರಾಗುತ್ತದೆ.
ಗಂಟಲು ಹಾಗೂ ಬಾಯಿಗೆ ಸಂಬಂಧಿಸಿದ ಅನಾರೋಗ್ಯ ಕಾಡುತ್ತದೆ.
ಬುದ್ಧಿಯಲ್ಲಿ ಸಮಸ್ಯೆಯಾಗುವ ಜೊತೆಗೆ ಗುಪ್ತ ಸಮಸ್ಯೆ ಕಾಡಲು ಶುರುವಾಗುತ್ತದೆ.
ಜೀವನ ನಿಶ್ಚಿತ ರೂಪದಲ್ಲಿ ಅವನತಿಯತ್ತ ಸಾಗುತ್ತದೆ.
ಇಂಥ ಜನರು ಅವಶ್ಯವಾಗಿ ದುರಂತವನ್ನು ತಾವೇ ಮೈಮೇಲೆಳೆದುಕೊಳ್ತಾರೆ.
ಇದು ದೊಡ್ಡ ಸಮಸ್ಯೆಯಲ್ಲ. ಇದನ್ನು ಕೆಲ ಉಪಾಯಗಳ ಮೂಲಕ ಕಡಿಮೆ ಮಾಡಿಕೊಳ್ಳಬಹುದು.
ಸದಾ ಕೆಟ್ಟ ಶಬ್ಧ ಮಾತನಾಡುವವರು ಬೆಳಿಗ್ಗೆ ಸೂರ್ಯನಿಗೆ ಜಲವನ್ನು ಅರ್ಪಿಸಬೇಕು.
ದೊಡ್ಡದಾಗಿ ಗಾಯತ್ರಿ ಮಂತ್ರವನ್ನು ಜಪಿಸಬೇಕು.
ಪ್ರಾತಃ ಕಾಲದಲ್ಲಿ ತುಳಸಿ ಎಲೆಯನ್ನು ಸೇವಿಸಬೇಕು.
ಶುದ್ಧ ಆಹಾರವನ್ನು ತಿನ್ನಬೇಕು.
ಹಾಲಿನಿಂದ ಮಾಡಿದ ಪದಾರ್ಥವನ್ನು ಹೆಚ್ಚು ಸೇವನೆ ಮಾಡಬೇಕು.
ಹಸಿರು ಬಣ್ಣವನ್ನು ಹೆಚ್ಚಾಗಿ ಬಳಸಬೇಕು.