ಹಲವು ವರ್ಷಗಳಿಂದ ಜನರ ತಲೆಯಲ್ಲೊಂದು ಪ್ರಶ್ನೆ ಮೊಳಕೆಯೊಡೆದಿದ್ದು ಇನ್ನೂ ಹಾಗೆಯೇ ಇದೆ. ಮೊದಲು ಭೂಮಿಗೆ ಬಂದಿದ್ದು ಕೋಳಿಯೋ ಅಥವಾ ಮೊಟ್ಟೆಯೋ ಎಂಬ ಬಗ್ಗೆ ಹಲವಾರು ವರ್ಷಗಳಿಂದ ಜನರು ಪ್ರಶ್ನಿಸುತ್ತಲೇ ಇದ್ದಾರೆ. ಆದರೆ, ಯಾರೊಬ್ಬರಿಗೂ ಇದಕ್ಕೆ ಸರಿಯಾದ ಉತ್ತರ ಹೊಂದಲು ಸಾಧ್ಯವಾಗಿಲ್ಲ. ಆದರೆ, ಇದೀಗ ವಿಜ್ಞಾನಿಗಳು ಇದಕ್ಕೆ ಉತ್ತರವನ್ನು ಕಂಡುಕೊಂಡಿದ್ದಾರೆ.
ಮೊಟ್ಟೆ ಎಲ್ಲಿಂದ ಬಂತು ಅಂದ್ರೆ ಕೋಳಿಯಿಂದ ಅಂತಾರೆ. ಆದರೆ ಕೋಳಿ ಬರಲು ಮೊಟ್ಟೆ ಬೇಕಲ್ವಾ ಎಂಬುದು ಹಲವರ ಪ್ರಶ್ನೆ. ಕೋಳಿ ಮೊದಲೋ, ಮೊಟ್ಟೆ ಮೊದಲು ಅಂತಾ ತಲೆ ಕೆರೆದುಕೊಂಡಿದ್ದಾರೆ. ಉತ್ತರದ ಹಿಂದಿನ ಕಾರಣವನ್ನು ನೋಡುವ ಮೊದಲು, ಕೋಳಿ ಮೊದಲು ಬಂದಿತು ಎಂದು ಅನೇಕ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. ಅಂದರೆ ಮೊಟ್ಟೆಯನ್ನು ರೂಪಿಸಲು ಈ ಪ್ರೊಟೀನ್ ಅಗತ್ಯವಿರಬೇಕು.
ಕೋಳಿಯಿಂದ ಉತ್ಪತ್ತಿಯಾದದ್ದು ಅಥವಾ ಮೊಟ್ಟೆಯಿಂದ ಕೋಳಿಯಾದದ್ದು? ಉದಾಹರಣೆಗೆ, ಕಾಲ್ಪನಿಕವಾಗಿ ಹೇಳೋದಾದ್ರೆ ಆನೆ-ಸಿಂಹದಿಂದ ಹುಟ್ಟಿದ ಮೊಟ್ಟೆಯನ್ನು ನೀಡಿದರೆ ಅದನ್ನು ಯಾರ ಮೊಟ್ಟೆ ಎಂದು ಕರೆಯುತ್ತಾರೆ? ಎರಡು ಜೀವಿಗಳು ಸಂತಾನೋತ್ಪತ್ತಿ ಮಾಡಿದಾಗ, ಅವುಗಳ ಎರಡೂ ಡಿಎನ್‌ಎಗಳು ತಮ್ಮ ಮಗುವಿನಲ್ಲಿ ಇರುತ್ತವೆ. ಆದರೆ ಅದು 100 ಪ್ರತಿಶತ ಒಂದೇ ಆಗಿರುವುದಿಲ್ಲ.
ಈ ರೂಪಾಂತರವು ಹೊಸ ಜಾತಿಯ ಜನನಕ್ಕೆ ಕಾರಣವಾಗುತ್ತದೆ. ಈ ರೂಪಾಂತರವು ಮೊಟ್ಟೆಯಲ್ಲಿರುವ ಜೀವಕೋಶದಲ್ಲಿ ನಡೆಯುತ್ತದೆ. ಇದರರ್ಥ ಲಕ್ಷಗಟ್ಟಲೆ ವರ್ಷಗಳ ಹಿಂದೆ, ಮೂಲ ಮಾದರಿಯ ಕೋಳಿ ಎಂದು ಕರೆಯಲ್ಪಡುವ ಕೋಳಿ ಮಾದರಿಯ ಜೀವಿಗಳು ಮತ್ತೊಂದು ಮಾದರಿಯ ಕೋಳಿಯೊಂದಿಗೆ ಸಂಯೋಗ ಹೊಂದಿದ್ದವು. ನಂತರ ಆನುವಂಶಿಕ ರೂಪಾಂತರದ ನಂತರ, ವಿಭಿನ್ನವಾದ ಮೊಟ್ಟೆ ಅಸ್ತಿತ್ವಕ್ಕೆ ಬಂದಿತು.
ಇಂದು ನಮಗೆ ತಿಳಿದಿರುವ ಪ್ರಪಂಚದ ಮೊದಲ ಕೋಳಿ ಇದು. ಆದಾಗ್ಯೂ, ಈ ರೂಪಾಂತರವನ್ನು ಒಂದೇ ಮೊಟ್ಟೆಯಿಂದ ಲೆಕ್ಕಹಾಕಲಾಗುವುದಿಲ್ಲ. ಏಕೆಂದರೆ ಇದು ವರ್ಷಗಳವರೆಗೆ ನಡೆಯುವ ಪ್ರಕ್ರಿಯೆಯಾಗಿದ್ದು, ಅದು ನಿಧಾನವಾಗಿ ಪರಿವರ್ತನೆಗೆ ಕಾರಣವಾಗುತ್ತದೆ. ಈ ಮ್ಯುಟೇಶನ್ ಕೂಡ ಸಾಕಷ್ಟು ಸಮಯ ತೆಗೆದುಕೊಂಡಿರಬೇಕು ಎಂದು ವಿಜ್ಞಾನಿಗಳು ಹೇಳಿದ್ದಾರೆ.