ನೆಲದ ಮೇಲೆ ವಾಸಿಸುವ ಪ್ರಾಣಿಗಳಲ್ಲಿ ಜಿರಾಫೆ ಅತ್ಯಂತ ದೊಡ್ಡದು. ಆಗ ತಾನೇ ಜನಿಸಿರುವ ಜಿರಾಫೆ ಮರಿಗಳು ಮನುಷ್ಯರಿಗಿಂತ ದೊಡ್ಡದಾಗಿರುತ್ತದೆ. ಹುಟ್ಟಿದ ಅರ್ಧ ಗಂಟೆಯೊಳಗೆ ಜಿರಾಫೆ ಮರಿಗಳು ಎದ್ದು ನಿಲ್ಲುತ್ತವೆ.
ಹತ್ತು ಗಂಟೆಗಳ ಆಗುವ ಮುನ್ನವೇ ಓಡಾಡಲು ಆರಂಭಿಸುತ್ತವೆ. ಆದರೆ ಅದಕ್ಕೆ ಮೂರ್ನಾಲ್ಕು ತಿಂಗಳು ಆಗುವ ತನಕ ತಾಯಿ ಜಿರಾಫೆ ಅದನ್ನು ಎಲ್ಲಿಗೂ ಕಳಿಸುವುದಿಲ್ಲ.
ಇವು ಬದುಕಿರುವಷ್ಟು ಕಾಲದಲ್ಲಿ ಅಧಿಕ ಸಮಯ ನಿಂತೇ ಇರುತ್ತವೆ. ನಿಂತೇ ನಿದ್ರೆ ಮಾಡುತ್ತವೆ. ನಿಂತುಕೊಂಡೇ ಮಗುವಿಗೆ ಜನ್ಮ ನೀಡುತ್ತವೆ. ಜಿರಾಫೆಗಳು ಪ್ರತಿದಿನ 10 ನಿಮಿಷಗಳಿಂದ ಹಿಡಿದು 2 ಗಂಟೆಗಳ ಕಾಲ ಮಾತ್ರ ನಿದ್ರಿಸುತ್ತವೆ. ವಿಶ್ವದಲ್ಲಿ ಮತ್ತೆ ಯಾವ ಜೀವಿಯೂ ಇಷ್ಟೊಂದು ಕಡಿಮೆ ಅವಧಿಯಲ್ಲಿ ನಿದ್ರೆ ಮಾಡುವುದಿಲ್ಲ.
ಇಬ್ಬರು ಮನುಷ್ಯರ ಹೆಬ್ಬೆರಳಿನ ಗುರುತು ಹೇಗೆ ಒಂದೇ ರೀತಿ ಇರುವುದಿಲ್ಲವೋ ಅದೇ ರೀತಿ ಎರಡು ಜಿರಾಫೆ ದೇಹದ ಮೇಲಿರುವ ಮಚ್ಚೆಗಳು ಒಂದಕ್ಕೊಂದು ಹೋಲುವುದಿಲ್ಲ. ಈ ಮಚ್ಚೆಗಳ ಮೂಲಕ ಅವುಗಳ ವಯಸ್ಸು ಕಂಡು ಹಿಡಿಯಲಾಗುತ್ತದೆ.