
ವೆಸ್ಟ್ ಇಂಡೀಸ್ ವಿರುದ್ಧ ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಸಿರೀಸ್ ಓಪನರ್, ಏಕದಿನ ಪಂದ್ಯದೊಂದಿಗೆ ಭಾರತವು 1,000 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಭಾರತೀಯ ಕ್ರಿಕೆಟ್ ತಂಡಕ್ಕೆ 463 ಅಂತರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಅದ್ಭುತವಾಗಿ ಆಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ಈ ಸಂದರ್ಭದಲ್ಲಿ ಇಡೀ ತಂಡವನ್ನ ಅಭಿನಂದಿಸಿದ್ದಾರೆ. ಭಾರತದ 200ನೇ, 300ನೇ, 400ನೇ, 500ನೇ, 600ನೇ, 700ನೇ ಮತ್ತು 800ನೇ ಏಕದಿನ ಪಂದ್ಯಗಳ ಭಾಗವಾಗಿದ್ದ ಸಚಿನ್, ಭಾರತ ತನ್ನ 1000 ಏಕದಿನ ಪಂದ್ಯವನ್ನು ಆಡುತ್ತಿರುವುದು ಒಂದು ದೊಡ್ಡ ಮೈಲಿಗಲ್ಲು. 1974 ರಲ್ಲಿ ಮೊದಲ ಒಡಿಐ ಪಂದ್ಯವಾಡಿದ ನಾವು, 1000 ODI ಆಡುತ್ತಿದ್ದೇವೆ. ಜುಲೈ 13, 1974 ರಂದು ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಭಾರತೀಯ ಪುರುಷರ ತಂಡವು ತಮ್ಮ ಮೊದಲ ODI ನಲ್ಲಿ ಇಂಗ್ಲೆಂಡ್ ಅನ್ನು ಎದುರಿಸಿದಾಗ, ಭಾರತವು 1000 ಪಂದ್ಯಗಳನ್ನು ಆಡುವ ಮೈಲಿಗಲ್ಲನ್ನು ತಲುಪಿದ ಮೊದಲ ರಾಷ್ಟ್ರವಾಗಲಿದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.
ಲೈಕ್ಸ್‌ಗಾಗಿ ಕಾಡಾನೆಗೆ ಕಿರುಕುಳ ನೀಡಿದ ಟಿಕ್ ಟಾಕರ್..!
ಇದು ಹಿಂದಿನ ಕ್ರಿಕೆಟಿಗರು, ಪ್ರಸ್ತುತ ಕ್ರಿಕೆಟಿಗರು, ಹಿಂದಿನ ಮಂಡಳಿಯ ಸದಸ್ಯರು, ಪ್ರಸ್ತುತ ಮಂಡಳಿಯ ಸದಸ್ಯರಿಂದ ಮಾತ್ರ ಸಾಧ್ಯವಾಯಿತು. ಹಿಂದಿನ ತಲೆಮಾರಿನ ಪ್ರಮುಖ ವ್ಯಕ್ತಿಗಳನ್ನು ನಮ್ಮ ಭಾರತೀಯ ಕ್ರಿಕೆಟ್ ತಂಡದ ಹಿತೈಷಿಗಳನ್ನು ಮರೆಯಬಾರದು. ಇಂದು ನಮ್ಮೊಂದಿಗಿರುವವರು ಮತ್ತು ಹಿಂದೆ ಇದ್ದವರು, ಮುಂದೆ ಇರುವವರು, ಇದು ನಮ್ಮೆಲ್ಲರ ಸಾಧನೆ ಎಂದು ಹೇಳಲು ಬಯಸುತ್ತೇನೆ ಎಂದು ಭಾರತದ ಸಾಧನೆಗೆ ಸಚಿನ್ ತೆಂಡುಲ್ಕರ್ ಶುಭಾಶಯ ಕೋರಿದ್ದಾರೆ.
ಜೊತೆಗೆ ಇಡೀ ರಾಷ್ಟ್ರವು ಇದರ ಬಗ್ಗೆ ಹೆಮ್ಮೆಪಡಬೇಕು, ಭಾರತೀಯ ಕ್ರಿಕೆಟ್ ಮತ್ತಷ್ಟು ಸಾಧ್ಯವಾಯಿತು. ಭಾರತ ಮತ್ತಷ್ಟು ಬಲವಾಗಿ ಮುಂದುವರೆಯುತ್ತದೆ ಎಂಬ ಭರವಸೆ ಇದೆ. ಫೆಬ್ರವರಿ 6 ರಂದು ವೆಸ್ಟ್ ಇಂಡೀಸ್ ವಿರುದ್ಧ ಅಹಮದಾಬಾದ್‌ನಲ್ಲಿ ನಡೆಯಲಿರುವ, 1000ನೇ ODI ಪಂದ್ಯಕ್ಕಾಗಿ ಭಾರತೀಯ ತಂಡಕ್ಕೆ ಶುಭ ಹಾರೈಸುತ್ತೇನೆ ಎಂದಿದ್ದಾರೆ.
ತೆಂಡೂಲ್ಕರ್ ಅವರ ಚೊಚ್ಚಲ ಪಂದ್ಯದಿಂದ ನಿವೃತ್ತಿಯ ತನಕ ಭಾರತ 638 ಪಂದ್ಯಗಳನ್ನು ಆಡಿದೆ. 1989ರಲ್ಲಿ ಒಡಿಐಗೆ ಪಾದಾರ್ಪಣೆ ಮಾಡಿದ ತೆಂಡುಲ್ಕರ್ ಪಾಕಿಸ್ತಾನದ ವಿರುದ್ಧ ಆಡಿದ್ದರು. ಅದು ಭಾರತದ 166ನೇ ಪಂದ್ಯವಾಗಿತ್ತು. ಕಾಕತಾಳೀಯವಾಗಿ, 2012 ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಆಡಿದ 804 ನೇ ODI ನಂತರ ಲಿಟಲ್ ಮಾಸ್ಟರ್ ನಿವೃತ್ತಿ ಘೋಷಿಸಿದರು.