ಸಚಿವ ಸ್ಥಾನ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಲು ಹೊರಟಿದ್ದ ಪಶ್ಚಿಮ ಬಂಗಾಳದ ಮಾಜಿ ಸಚಿವ ಸುವೆಂದು ಅಧಿಕಾರಿ ಅವರಿಗೆ ವಿಧಾನಸಭೆ ಸ್ಪೀಕರ್ ಬಿಗ್ ಶಾಕ್ ನೀಡಿದ್ದಾರೆ.
ಸುವೆಂದು ಅಧಿಕಾರಿ ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಪಶ್ಚಿಮಬಂಗಾಳ ವಿಧಾನಸಭೆ ಅಧ್ಯಕ್ಷ ವಿಮನ್ ಬ್ಯಾನರ್ಜಿ ತಿರಸ್ಕರಿಸಿದ್ದಾರೆ. ರಾಜೀನಾಮೆ ಸರಿಯಾಗಿ ಸಲ್ಲಿಕೆಯಾಗಿಲ್ಲ ಎಂಬ ಕಾರಣ ನೀಡಿ ಸುವೆಂದು ಅಧಿಕಾರಿಯವರ ರಾಜೀನಾಮೆಯನ್ನು ತಿರಸ್ಕರಿಸಲಾಗಿದೆ.
ಸುವೆಂದು ಅಧಿಕಾರಿ ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರಲು ಮುಂದಾಗಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆ ಹೊತ್ತಲ್ಲೇ ಟಿಎಂಸಿಗೆ ಶಾಕ್ ಮೇಲೆ ಎದುರಾಗುತ್ತಿದ್ದು, ಪ್ರಭಾವಿ ನಾಯಕ ಸುವೆಂದು ಅಧಿಕಾರಿ ಪಕ್ಷ ದೊರೆಯುತ್ತಿರುವುದು ನುಂಗಲಾರದ ತುತ್ತಾಗಿದೆ.
ಶಾಸಕ ಸ್ಥಾನಕ್ಕೆ ಸುವೆಂದು ಅಧಿಕಾರಿ ನೀಡಿದ ರಾಜೀನಾಮೆಯನ್ನು ಸ್ಪೀಕರ್ ತಿರಸ್ಕರಿಸಿದ್ದಾರೆ. ರಾಜೀನಾಮೆ ಸ್ವಯಂ ಪ್ರೇರಿತ ಮತ್ತು ನೈಜವಾದುದು ಎಂದು ನನಗೆ ಅನಿಸುತ್ತಿಲ್ಲ. ಸಂವಿಧಾನದ ನಿಬಂಧನೆ ಮತ್ತು ವಿಧಾನಸಭೆಯ ಕಾರ್ಯವಿಧಾನಗಳ ನಿಯಮಗಳನುಸಾರ ಅವರ ರಾಜೀನಾಮೆಯನ್ನು ಸ್ವೀಕರಿಸಲು ಸಾಧ್ಯವಿಲ್ಲವೆಂದು ಸ್ಪೀಕರ್ ಬ್ಯಾನರ್ಜಿ ಹೇಳಿದ್ದಾರೆ.
ಬಿಜೆಪಿ ಸೇರಬೇಕಿದ್ದ ಹೊತ್ತಲ್ಲೇ ಸುವೆಂದು ಅಧಿಕಾರಿಗೆ ಹಿನ್ನಡೆಯಾಗಿದೆ. ರಾಜೀನಾಮೆ ಸ್ವೀಕೃತವಾದ ನಂತರ ಅವರು ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.