ಛತ್ತೀಸಗಢ ಸರ್ಕಾರದ ಬಳಿಕ ಇದೀಗ ಪಶ್ಚಿಮ ಬಂಗಾಳ ಸರ್ಕಾರ ಕೂಡ ಕೊರೊನಾ ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿಯವರ ಫೋಟೋವನ್ನ ತೆಗೆದು ಹಾಕಿದೆ. ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿಯ ಫೋಟೋದ ಬದಲಾಗಿ ಮಮತಾ ಬ್ಯಾನರ್ಜಿ ಫೋಟೋವುಳ್ಳ ಪ್ರಮಾಣ ಪತ್ರಗಳನ್ನ ಲಸಿಕೆ ಸ್ವೀಕರಿಸಿದವರಿಗೆ ನೀಡಲಾಗ್ತಿದೆ.
ಮೂರನೇ ಹಂತದಲ್ಲಿ ಲಸಿಕೆಯನ್ನ ಸ್ವೀಕರಿಸುತ್ತಿರುವ 18 ರಿಂದ 44 ವರ್ಷದವರಿಗೆ ಎರಡು ಡೋಸ್ಗಳನ್ನ ಸ್ವೀಕರಿಸಿದ ಬಳಿಕ ಮಮತಾ ಬ್ಯಾನರ್ಜಿ ಫೋಟೋವನ್ನ ಒಳಗೊಂಡಿರುವ ಪ್ರಮಾಣಪತ್ರವನ್ನ ನೀಡಲಾಗಿದೆ.
ಕಾಂಗ್ರೆಸ್ ಆಡಳಿತವಿರುವ ಛತ್ತೀಸಗಢ ಸರ್ಕಾರ ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿ ಫೋಟೋವನ್ನ ತೆಗೆದು ಸಿಎಂ ಭೂಪೇಶ್ ಬಾಘೇಲ್ ಫೋಟೋವನ್ನ ಹಾಕಿತ್ತು. ಇದೀಗ ಪಶ್ಚಿಮ ಬಂಗಾಳ ಕೂಡ ಛತ್ತೀಸಗಢ ಸರ್ಕಾರ ದಾರಿಯನ್ನೇ ತುಳಿದಿದೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯುತ್ತಿದ್ದ ವೇಳೆ ತೃಣಮೂಲ ಕಾಂಗ್ರೆಸ್ ಲಸಿಕೆ ಪ್ರಮಾಣ ಪತ್ರದ ಮೇಲೆ ಪ್ರಧಾನಿ ಮೋದಿ ಫೋಟೋವನ್ನ ಹಾಕಿರೋದು ಚುನಾವಣಾ ನೀತಿ ಸಂಹಿತೆಗೆ ವಿರೋಧವಾಗಿದೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು.