ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹಲವು ಅಚ್ಚರಿ ಬೆಳವಣಿಗೆಗೆ ಸಾಕ್ಷಿಯಾಗಿದೆ. ದಿನಗೂಲಿ ಕಾರ್ಮಿಕನ ಪತ್ನಿ ಸಾಲ್ಟೋರಾ ವಿಧಾನಸಭೆ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚಂದನಾ ಬೌರಿ 4 ಸಾವಿರ ಮತಗಳ ಅಂತರದಿಂದ ಟಿಎಂಸಿ ಅಭ್ಯರ್ಥಿ ಸಂತೋಷ್ ಕುಮಾರ್ ಮಂಡಲ್ ವಿರುದ್ಧ ಜಯಗಳಿಸಿದ್ದಾರೆ. ಚುನಾವಣೆ ಅಫಿಡವಿಟ್ ಪ್ರಕಾರ, ಚಂದನಾ ಅವರ ಆಸ್ತಿ ಕೇವಲ 31,985 ರೂಪಾಯಿ. ಅವರ ಪತಿ ಆಸ್ತಿ 30,311 ರೂಪಾಯಿ.
ಚಂದನಾ ಅವರ ಪತಿ ದೈನಂದಿನ ವೇತನಕ್ಕಾಗಿ ಮೇಸನ್ ಕೆಲಸ ಮಾಡುತ್ತಾರೆ. ಮೂರು ಮಕ್ಕಳ ತಾಯಿಯಾಗಿರುವ ಚಂದನಾ ಪತಿಯೊಂದಿಗೆ ಮೂರು ಹಸುಗಳು ಮತ್ತು ಮೂರು ಆಡುಗಳನ್ನು ಹೊಂದಿದ್ದಾರೆ.
ಟಿಕೆಟ್ ಘೋಷಿಸುವ ಮೊದಲು ನಾನು ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಆಯ್ಕೆಯಾಗುತ್ತೇನೆ ಎಂದು ನನಗೆ ತಿಳಿದಿರಲಿಲ್ಲ. ಆನ್ಲೈನ್ನಲ್ಲಿ ನಾಮನಿರ್ದೇಶನಕ್ಕೆ ಅರ್ಜಿಸಲ್ಲಿಸಲು ಅನೇಕರು ನನಗೆ ಪ್ರೋತ್ಸಾಹ ನೀಡಿದ್ದರು. ಹಾಗಾಗಿ ಅರ್ಜಿ ಸಲ್ಲಿಸಿದ್ದೆ. ಶಾಸಕಿಯಾಗಿರುವುದು ಖುಷಿಯಾಗಿದೆ. ಜನರ ಸೇವೆ ಮಾಡುತ್ತೇನೆ ಎಂದು ಚಂದನಾ ಹೇಳಿದ್ದಾರೆ. ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.