ಕೊರೊನಾ ವೈರಸ್ ವಿರುದ್ದದ ಯುದ್ಧದಲ್ಲಿ ಲಸಿಕೆಯನ್ನು ದೊಡ್ಡ ಶಸ್ತ್ರವಾಗಿ ಬಳಸಲಾಗಿದೆ. ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ದೇಶದಲ್ಲಿ ಸದ್ಯ ಕೋವಿಶೀಲ್ಡ್, ಕೋವ್ಯಾಕ್ಸಿನ್ ಹಾಗೂ ಸ್ಪುಟ್ನಿಕ್ ಲಸಿಕೆ ನೀಡಲಾಗ್ತಿದೆ. ಈ ಮಧ್ಯೆ ನ್ಯೂಜಿಲ್ಯಾಂಡ್ ನಿಂದ ದೊಡ್ಡ ಸುದ್ದಿಯೊಂದು ಬಂದಿದೆ.
ನ್ಯೂಜಿಲ್ಯಾಂಡ್ ನಲ್ಲಿ ಫೈಜರ್ ಲಸಿಕೆ ಪಡೆದ ಮಹಿಳೆಯೊಬ್ಬಳು ಸಾವನ್ನಪ್ಪಿದ್ದಾಳೆ. ಸೋಮವಾರ, ಆರೋಗ್ಯ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದೆ. ಮಹಿಳೆ ಹೃದಯಾಘಾತಕ್ಕೊಳಗಾಗಿದ್ದಾಳೆ ಎಂದು ನ್ಯೂಜಿಲ್ಯಾಂಡ್ ಆರೋಗ್ಯ ಸಚಿವಾಲಯ ಹೇಳಿದೆ. ಇದು ಫೈಜರ್ ಲಸಿಕೆ ಅಡ್ಡ ಪರಿಣಾಮದಿಂದ ಆಗಿದೆ ಎನ್ನಲಾಗ್ತಿದೆ.
ಕೊರೊನಾ ವೈರಸ್ ಡೆಲ್ಟಾ ವೇರಿಯಂಟ್ ನ್ಯೂಜಿಲ್ಯಾಂಡ್‌ನ ಆಕ್‌ಲ್ಯಾಂಡ್‌ನಲ್ಲಿ ಅಬ್ಬರಿಸುತ್ತಿದೆ. ಎರಡು ವಾರಗಳ ಲಾಕ್‌ಡೌನ್ ವಿಧಿಸಲಾಗಿದೆ. ವರ್ಲ್ಡೋಮೀಟರ್ ಮಾಹಿತಿಯ ಪ್ರಕಾರ, ನ್ಯೂಜಿಲೆಂಡ್‌ನಲ್ಲಿ 3519 ಜನರು ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ. ಅದರಲ್ಲಿ 26 ಜನರು ಪ್ರಾಣ ಕಳೆದುಕೊಂಡಿದ್ದಾರೆ. 2890 ಜನರು ಈ ಸಾಂಕ್ರಾಮಿಕ ರೋಗದಿಂದ ಗುಣಮುಖರಾಗಿದ್ದಾರೆ. ನ್ಯೂಜಿಲೆಂಡ್‌ನಲ್ಲಿ 603 ಸಕ್ರಿಯ ಕೊರೊನಾ ವೈರಸ್ ಪ್ರಕರಣಗಳಿವೆ.