
ವಿಜಯಪುರ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಬಾವಿಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ.
ಸೋಮಶೇಖರ ಆಲಮೇಲ, ಮಲಿಕ್ ನದಾಫ್ ಮೃತಪಟ್ಟ ಬಾಲಕರು ಎಂದು ಹೇಳಲಾಗಿದೆ. ಇಬ್ಬರು 16 ವರ್ಷ ವಯಸ್ಸಿನವರಾಗಿದ್ದಾರೆ. ಬಿಸಿಲ ಬೇಗೆ ಹಿನ್ನೆಲೆಯಲ್ಲಿ ಬಾಲಕರು ಸ್ನಾನ ಮಾಡಲು ಬಾವಿಗೆ ಇಳಿದಿದ್ದಾರೆ. ಈಜು ಬಾರದಿದ್ದರೂ ಬಾವಿಯಲ್ಲಿ ಸ್ನಾನ ಮಾಡಲು ತೆರಳಿದ್ದ ವೇಳೆ ದುರ್ಘಟನೆ ನಡೆದಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.