ದೀಪಾವಳಿಯಲ್ಲಿ ದೀಪಗಳ ಜೊತೆ ಬಣ್ಣ ಬಣ್ಣದ ಸುಂದರ ರಂಗೋಲಿ ಇರಲೇಬೇಕು. ಹಿಂದಿನ ಕಾಲದಲ್ಲಿ ಸಂಪ್ರದಾಯವಾಗಿದ್ದ ರಂಗೋಲಿ ಈಗ ಫ್ಯಾಷನ್ ಆಗಿದೆ.
ಬಣ್ಣ ಬಣ್ಣದ, ಬಗೆ ಬಗೆಯ ರಂಗೋಲಿ ವಿನ್ಯಾಸಗಳು ಗಮನ ಸೆಳೆಯುತ್ತವೆ. ರಂಗೋಲಿಯನ್ನು ರಂಗೋಲಿ ಹುಡಿ, ಹೂ, ದೀಪಗಳ ಮೂಲಕ ಕೂಡ ಬಿಡಿಸಬಹುದು.
ಮಾರುಕಟ್ಟೆಯಲ್ಲಿ ಬಗೆ ಬಗೆಯ ರಂಗೋಲಿ ವಿನ್ಯಾಸ ಹಾಗೂ ರೆಡಿಮೆಡ್ ರಂಗೋಲಿಗಳು ಸಿಗ್ತವೆ. ಅದ್ರ ಸಹಾಯದಿಂದಲೂ ರಂಗೋಲಿ ಬಿಡಿಸಬಹುದು.
ರಂಗೋಲಿ ಬಿಡಿಸುವ ವೇಳೆ ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಮನೆಯ ಯಾವ ಭಾಗಕ್ಕೆ ರಂಗೋಲಿ ಹಾಕುತ್ತೀರಿ ಎಂಬುದನ್ನು ಮೊದಲು ನಿರ್ಧರಿಸಿ. ಜಾಗಕ್ಕೆ ಹೊಂದುವ ರಂಗೋಲಿ ವಿನ್ಯಾಸವನ್ನು ಆಯ್ಕೆ ಮಾಡಿ.
ನೀವು ಹಾಕುವ ರಂಗೋಲಿಗೆ ಬಣ್ಣಗಳ ಆಯ್ಕೆ ಸೂಕ್ತವಾಗಿರಲಿ. ಬಣ್ಣ ಬಣ್ಣದ ಹೂಗಳಿಂದ ಕೂಡ ರಂಗೋಲಿಯನ್ನು ಅಲಂಕರಿಸಬಹುದು.
ಜರಡಿ ಸಹಾಯದಿಂದಲೇ ರಂಗೋಲಿಗೆ ಬಣ್ಣ ತುಂಬಿ. ಆಗ ಬಣ್ಣ ಅತ್ತಿಂದಿತ್ತ ಹರಡುವುದಿಲ್ಲ. ಪ್ಲಾಸ್ಟಿಕ್ ಕೋನದ ಸಹಾಯದಿಂದಲೇ ರಂಗೋಲಿ ಅಂಚನ್ನು ಸರಿ ಮಾಡಿ.
ರಂಗೋಲಿ ಸಿದ್ಧವಾದ ಮೇಲೆ ದೀಪಗಳಿಂದ ಅದನ್ನು ಅಲಂಕರಿಸಿ.