ಕೊರೊನಾ ಲಸಿಕೆ ಹಾಕಿಕೊಳ್ಳುವಂತೆ ಎಲ್ಲ ದೇಶಗಳಲ್ಲೂ ಜನರಿಗೆ ಮನವಿ ಮಾಡ್ತಿವೆ. ಯುಎನ್, ಡಬ್ಲ್ಯುಎಚ್ಒ ಸೇರಿದಂತೆ ಹಲವು ಸಂಸ್ಥೆಗಳು, ಪ್ರತಿ ದಿನ, ವಿಭಿನ್ನ ರೀತಿಯಲ್ಲಿ ಮನವಿ ಮಾಡ್ತಿವೆ. ಅಮೆರಿಕದ ಉತ್ತರ ಕೆರೊಲಿನಾದ ನಗರದ ಬೀದಿಗಳಲ್ಲಿ ಓಡಾಡ್ತಿರುವ ವ್ಯಾನ್ ಗಮನ ಸೆಳೆದಿದೆ. ಅದ್ರ ಹಿಂಭಾಗದಲ್ಲಿ ಕೊರೊನಾ ಲಸಿಕೆ ಬಗ್ಗೆ ಬರೆಯಲಾಗಿದೆ.
ವ್ಯಾನ್ ಹಿಂದೆ ದೊಡ್ಡ ಅಕ್ಷರಗಳಲ್ಲಿ, ಲಸಿಕೆ ತೆಗೆದುಕೊಳ್ಳಬೇಡಿ ಎಂದು ಬರೆಯಲಾಗಿದೆ. ಲಸಿಕೆ ವಿರೋಧಿಗಳು ಈ ಬಗ್ಗೆ ಜಾಹೀರಾತು ನಡೆಸುತ್ತಿದ್ದಾರೆಂದು ಭಾವಿಸಿದ್ರೆ ಅದು ತಪ್ಪು. ದೊಡ್ಡ ಅಕ್ಷರದ ಕೆಳಗೆ, ವಿಲ್ಮೋರ್ ಫ್ಯೂನರಲ್ ಹೋಮ್ ಎಂದು ಸಣ್ಣದಾಗಿ ಬರೆಯಲಾಗಿದೆ. ಕೊರೊನಾ ಲಸಿಕೆ ತೆಗೆದುಕೊಳ್ಳದೆ ಹೋದ್ರೆ ಸ್ಮಶಾನಕ್ಕೆ ಹೋಗ್ತಿರಾ ಎಂಬುದು ಇದ್ರ ಅರ್ಥ.
ಈಗ ಲಸಿಕೆ ಪಡೆಯಿರಿ, ಇಲ್ಲದಿದ್ದರೆ ನಾವು ಶೀಘ್ರದಲ್ಲೇ ಭೇಟಿಯಾಗುತ್ತೇವೆ ಎಂದು ಬರೆಯಲಾಗಿದ್ದು, ಈ ವ್ಯಾನ್, ನಗರದ ತುಂಬ ಓಡಾಡ್ತಿದೆ. ಹೆಚ್ಚಿನ ಮಾಹಿತಿಗಾಗಿ ಜನರು ವೆಬ್ಸೈಟ್ಗೆ ಹೋಗಿ, ಮಾಹಿತಿ ಪಡೆಯುತ್ತಿದ್ದಾರೆ.
ಯುಎಸ್ ನಲ್ಲಿ 3 ಕೊರೊನಾ ಲಸಿಕೆಗೆ ಅನುಮೋದನೆ ಸಿಕ್ಕಿದ್ದು, ಭಾರತಕ್ಕಿಂತ ಮೊದಲೇ ಲಸಿಕೆ ಅಭಿಯಾನ ಶುರುವಾಗಿದೆ.