ಜಗತ್ತಿನಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಜನರ ಚಿತ್ರ-ವಿಚಿತ್ರ ಮದುವೆಗಳೂ ಈಗ ಸುದ್ದಿಗೆ ಬರ್ತಿವೆ. ಬ್ರಿಟನ್ ನಲ್ಲಿ ಮಹಿಳೆಯೊಬ್ಬಳು ಡಾಲ್ಫಿನ್ ಜೊತೆ ಮದುವೆಯಾಗಿ ಸುದ್ದಿ ಮಾಡಿದ್ದಳು. ಶರೋನ್ ಟೆಂಡ್ಲರ್ ಗೆ ಮೊದಲ ನೋಟದಲ್ಲಿಯ ಡಾಲ್ಫಿನ್ ಮೇಲೆ ಪ್ರೀತಿ ಚಿಗುರಿತ್ತಂತೆ.
ಕೆಲ ದಿನಗಳ ಕಾಲ ಡಾಲ್ಫಿನ್ ಜೊತೆ ರಿಲೇಷನ್ಶಿಪ್ ನಲ್ಲಿದ್ದ ಶರೋನ್, ನಂತ್ರ ಪದ್ಧತಿಯಂತೆ ಮದುವೆಯಾಗಿದ್ದಳು. ಅವರಿಬ್ಬರ ಪ್ರೇಮ ಕಥೆ ವಿಚಿತ್ರವಾಗಿದೆ. ಮದುವೆಯಾಗುವುದು ಸುಲಭವಾಗಿರಲಿಲ್ಲ. ಸಿಂಡಿ, ಇಸ್ರೇಲ್ ನಲ್ಲಿ ವಾಸಿಸುತ್ತಿದ್ದರೆ, ಶರೋನ್ ಬ್ರಿಟನ್ ನಲ್ಲಿ ವಾಸಿಸುತ್ತಿದ್ದಳು. ಈ ಕಾರಣದಿಂದಾಗಿ 16 ವರ್ಷಗಳ ಡೇಟಿಂಗ್ ಅವಧಿಯಲ್ಲಿ, ಸಿಂಡಿಯನ್ನು ಭೇಟಿಯಾಗಲು ಶರೋನ್ ಹಲವಾರು ಬಾರಿ ಇಸ್ರೇಲ್ಗೆ ಹೋಗಿದ್ದಳು. ನಂತರ ಡಾಲ್ಫಿನ್ನನ್ನು ಕೆಲವು ಜನರ ಮುಂದೆ ಮದುವೆಯಾಗಿ ಅದಕ್ಕೆ ಮುತ್ತಿಟ್ಟಿದ್ದಾಳೆ.
ಆದ್ರೆ ತುಂಬಾ ವರ್ಷಗಳ ಕಾಲ ಸಿಂಡಿ ಜೊತೆ ಇರುವ ಭಾಗ್ಯ ಶರೋನ್ ಗೆ ಸಿಗಲಿಲ್ಲ. 2006ರಲ್ಲಿ ಸಿಂಡಿ ಸಾವನ್ನಪ್ಪಿದ್ದ. ಹಾಗಾಗಿ ಅಲ್ಲಿಂದ ಈವರೆಗೆ ಶರೋನ್, ವಿಧವೆಯಂತೆ ಬದುಕುತ್ತಿದ್ದಾಳೆ.