ಮದುವೆ ಅಂದ್ಮೇಲೆ ನಗು, ಖುಷಿ, ಸಂತೋಷ ಇರಲೇಬೇಕು. ಆದ್ರೆ ಕೆಲವೊಂದು ಮದುವೆಯಲ್ಲಿ ವಿಚಿತ್ರ ಘಟನೆಗಳು ನಡೆಯುತ್ತವೆ. ರೆಡ್ಡಿಟ್ ನಲ್ಲಿ ವಿಚಿತ್ರ ಮದುವೆ ಪ್ರಕರಣವೊಂದನ್ನು ಮಹಿಳೆಯೊಬ್ಬಳು ಹಂಚಿಕೊಂಡಿದ್ದಾಳೆ.
ಮದುವೆಗೆ ಬಂದವರು ಮಾತನಾಡಿ, ತಿಂದುಂಡು ಹೋಗ್ತಾರೆ. ಆದ್ರೆ ಇಲ್ಲಿ ಮದುವೆಗೆ ಬಂದವರು ಪಾತ್ರೆ ತೊಳೆದಿದ್ದಾರೆ. ಯಸ್. ಮದುವೆಗೆ ಬಂದ ಸಂಬಂಧಿಕರನ್ನು ಅಡುಗೆ ಮನೆಗೆ ಕರೆದೊಯ್ದ ವಧು, ಪಾತ್ರೆ ತೊಳೆಯುವಂತೆ ಹೇಳಿದ್ದಾಳೆ. ಅಷ್ಟೆ ಅಲ್ಲ ಮದುವೆಗೆ ಬಂದ ಕೆಲವರಿಗೆ ಸರಿಯಾಗಿ ಊಟವೂ ಸಿಗಲಿಲ್ಲ.
ಹಸೆಮಣೆ ಏರಿದ್ದ ಜೋಡಿ ಸೆಲ್ಫ್ ಕ್ಯಾಟರಿಂಗ್ ವ್ಯವಸ್ಥೆ ಆಯ್ದುಕೊಂಡಿದ್ದರಂತೆ. ಅದ್ರ ಪ್ರಕಾರ ಅಡುಗೆ ಸರ್ವ್ ಮಾಡುವುದ್ರಿಂದ ಹಿಡಿದು ಪಾತ್ರೆ ತೊಳೆಯುವವರೆಗೆ ಎಲ್ಲವನ್ನೂ ಅವರೆ ಮಾಡಬೇಕು. ಮದುವೆಗೆ ಬಂದ ಅತಿಥಿಗಳಿಗೆ ತಮ್ಮ ಆರ್ಥಿಕ ಸಮಸ್ಯೆ ಹೇಳಿಕೊಂಡಿದ್ದ ಜೋಡಿ ಸಹಾಯ ಮಾಡುವಂತೆ ಕೇಳಿದ್ದರಂತೆ. ಹಾಗಾಗಿ ಮದುವೆಗೆ ಬಂದ ಸಂಬಂಧಿಕರು ಮದುವೆ ನೋಡುವ ಬದಲು ಸರ್ವ್ ಮಾಡುವುದು, ಪಾತ್ರೆ ತೊಳೆಯುವುದು ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಈ ಮದುವೆ ಬಗ್ಗೆ ಬರೆದ ಮಹಿಳೆ, ಮದುವೆ ಎಲ್ಲಿ ನಡೆದಿದೆ ಎನ್ನುವ ಬಗ್ಗೆ ಬರೆದಿಲ್ಲ.