ಮಕ್ಕಳು ಮನೆಯಲ್ಲಿದ್ದರೆ ಪ್ರತಿ ಕ್ಷಣವೂ ಮಕ್ಕಳ ಚಲನೆ ಬಗ್ಗೆ ಗಮನ ನೀಡಬೇಕಾಗುತ್ತದೆ. ಕಣ್ಣು ತಪ್ಪಿಸಿ ಮಕ್ಕಳು ಯಡವಟ್ಟು ಮಾಡ್ತಾರೆ. ಸದಾ ಕೈನಲ್ಲಿ ಮೊಬೈಲ್ ಹಿಡಿದಿರುವ ಮಕ್ಕಳು ಅದ್ರಲ್ಲಿ ಕೆಲವೊಂದು ಬಟನ್ ಒತ್ತಿ ಪಾಲಕರಿಗೆ ಸಮಸ್ಯೆ ತರುತ್ತಾರೆ. ಇದಕ್ಕೆ ಚೀನಾದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಚೀನಾದ ಪುಟ್ಟ ಹುಡುಗಿ ಆನ್‌ಲೈನ್‌ನಲ್ಲಿ 15,000 ರೂಪಾಯಿಗಳ ಆಹಾರವನ್ನು ಆರ್ಡರ್ ಮಾಡಿದ್ದಾಳೆ.
ಚೀನಾದ ಹುಡುಗಿ ತಂದೆ ಜೊತೆ ಕುಳಿತಿದ್ದಳಂತೆ. ಹಸಿವೆಯಲ್ಲಿದ್ದ ಹುಡುಗಿ ತಂದೆ ಮೊಬೈಲ್ ತೆಗೆದುಕೊಂಡು ಆರ್ಡರ್ ಮಾಡಲು ಶುರು ಮಾಡಿದ್ದಾಳೆ. ಒಂದಾದ ಮೇಲೆ ಒಂದರಂತೆ ಒಂದು ಗಂಟೆಯರೆಗೆ ಮನೆಗೆ ಪಾಸರ್ಲ್ ಬಂದಿದೆ. ನೂಡಲ್ಸ್ ಇಷ್ಟಪಡುವ ಹುಡುಗಿ ನೂಡಲ್ಸ್ ತರಿಸಿಕೊಂಡಿದ್ದಾಳೆ.
ಮೊದಲು ನೂಡಲ್ಸ್ ಬರ್ತಿದ್ದಂತೆ ತಂದೆ ಖುಷಿಯಾಗಿದ್ದನಂತೆ. ಆದ್ರೆ ಬಿಲ್ ನೋಡಿ ದಂಗಾಗಿದ್ದಾನೆ. ಹುಡುಗಿ ಸೋಯಾಬೀನ್ ಪೇಸ್ಟ್ ನೂಡಲ್ಸ್ ಆರ್ಡರ್ ಮಾಡಿದ್ದಾಳೆ. 100 ಪ್ಲೇಟ್ ನೂಡಲ್ಸ್ ಆರ್ಡರ್ ಮಾಡಿದ್ದಾಳೆ. ಇದ್ರ ಬಿಲ್ ಬರೋಬ್ಬರಿ 15 ಸಾವಿರ ರೂಪಾಯಿ ಬಂದಿದೆ. 8 ನೂಡಲ್ಸ್ ಇಟ್ಟುಕೊಂಡ ತಂದೆ ಉಳಿದ ಪ್ಲೇಟನ್ನು ಸಿಬ್ಬಂದಿಗೆ ಹಂಚಿದ್ದಾನಂತೆ.