
ದೆವ್ವಗಳ ಅಸ್ತಿತ್ವದ ಬಗ್ಗೆ ಆಗಾಗ್ಗೆ ಪ್ರಶ್ನೆಗಳು ಏಳುತ್ತವೆ. ಮನುಷ್ಯ ವಾಸಿಸುವ ಸ್ಥಳದಲ್ಲಿ ದೆವ್ವಗಳು ಇರುವುದು ಸಾಮಾನ್ಯವೆಂದು ಹೇಳಲಾಗುತ್ತದೆ. ಅನೇಕರು ಆತ್ಮದ ಜೊತೆ ಮಾತನಾಡಿರುವುದಾಗಿ ಹೇಳಿಕೊಂಡಿದ್ದಾರೆ. ಟೋನಿ ಮತ್ತು ಬೆತ್ ಫರ್ಗುಸನ್ ದೆವ್ವಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಭೂತದ ಜೊತೆ ಮಾತನಾಡಿರುವ ಕಥೆಯನ್ನು ಹಂಚಿಕೊಂಡಿದ್ದಾರೆ.
ಟೋನಿ ಮತ್ತು ಬೆತ್ ಫರ್ಗುಸನ್, ಕೆಲವು ಸಮಯದ ಹಿಂದೆ 300 ವರ್ಷಗಳ ಹಳೆಯ ಗುಹೆ ನೋಡಲು ಹೋಗಿದ್ದರು. ಅಲ್ಲಿ ಕೆಲವು ವಿಚಿತ್ರ ಘಟನೆಗಳು ನಡೆಯಿತಂತೆ. ಈ ದಂಪತಿ ಪ್ರಕಾರ, ಗುಹೆಯ ಬಳಿ ಇರುವ ಒಂದು ಆತ್ಮ , ಇವರ ಜೊತೆ ಮಾತನಾಡಿತ್ತಂತೆ. ಗುಹೆಯಿಂದ ದೂರವಿರುವಂತೆ ಭೂತ ಇವರ ಜೊತೆ ಮಾತನಾಡಿತ್ತಂತೆ. ಆದ್ರೆ ಭೂತ ಯಾವುದೇ ರೀತಿಯಲ್ಲಿ ತೊಂದರೆ ಮಾಡಿಲ್ಲವೆಂದು ದಂಪತಿ ಹೇಳಿದ್ದಾರೆ. ವಾಸ್ತವವಾಗಿ ದಂಪತಿಗೆ ನಮ್ಮ ಜೊತೆ ಮಾತನಾಡಿದ್ದು ಭೂತವೆಂಬುದು ಗೊತ್ತಾಗಿರಲಿಲ್ಲವಂತೆ.
ಮನೆಗೆ ಬಂದ ನಂತ್ರ ಗುಹೆಯ ಫೋಟೋಗಳನ್ನು ವೀಕ್ಷಿಸಿದ್ದಾರೆ. ಕ್ಯಾಮರಾದಲ್ಲಿ ಭೂತ ಸೆರೆಯಾಗಿದೆ. ಆತ್ಮದ ಫೋಟೋವನ್ನು ನೋಡಿದ ಅವರು ಆಶ್ಚರ್ಯಪಟ್ಟಿದ್ದಾರೆ.