ವಯಸ್ಸು 60 ದಾಟುತ್ತಿದ್ದಂತೆ ಜನರು ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಬಯಸ್ತಾರೆ. ಈಗಿನ ಕಾಲದಲ್ಲಿ 96 ವರ್ಷದವರೆಗೆ ಬದುಕುವುದೇ ಒಂದು ದೊಡ್ಡ ಸಾಧನೆ. ಹಾಗಿರುವಾಗ ಉತ್ತರ ಜರ್ಮನಿಯ 96 ವರ್ಷದ ವೃದ್ಧೆ ಮಾಡಿರುವ ಕೆಲಸ ಹುಬ್ಬೇರಿಸುವಂತಿದೆ.
ಈ ವೃದ್ಧೆ ನಾಜಿ ಆಕ್ರಮಿತ ಪೋಲೆಂಡ್‌ನಲ್ಲಿ ಎಸ್‌ಎಸ್ ಕಮಾಂಡರ್ ಕಾರ್ಯದರ್ಶಿಯಾಗಿದ್ದಳು. 11,000 ಜನರ ಹತ್ಯೆಗೆ ಸಹಾಯ ಮಾಡಿದ ಆರೋಪ ಈಕೆ ಮೇಲಿದೆ. ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ ವೃದ್ಧೆ ಇನ್ನೊಂದು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾಳೆ.
96 ವರ್ಷದ ವೃದ್ಧೆ ಹೆಸರು ಇರ್ಮ್‌ಗಾರ್ಡ್ ಫರ್ಚ್ನರ್. ವಿಚಾರಣೆಗಾಗಿ ಆಕೆ ನ್ಯಾಯಾಲಯಕ್ಕೆ ಬಂದಿರಲಿಲ್ಲ. ವಯಸ್ಸಿನ ಕಾರಣ ಹೇಳಿ, ವಿಚಾರಣೆ ತಪ್ಪಿಸಿಕೊಳ್ತಿದ್ದಳು. ನ್ಯಾಯಾಲಯವು ವೃದ್ಧೆಯ ವಿರುದ್ಧ ಬಂಧನ ವಾರೆಂಟ್ ಜಾರಿಗೊಳಿಸಿತು. ಬಂಧನ ವಾರೆಂಟ್ ಜಾರಿಯಾಗ್ತಿದ್ದಂತೆ ನ್ಯಾಯಾಲಯಕ್ಕೆ ಬರುವ ಬದಲು ವೃದ್ಧೆ ಟ್ಯಾಕ್ಸಿ ಹಿಡಿದು ಓಡಿ ಹೋಗಿದ್ದಾಳೆ.
96 ನೇ ವಯಸ್ಸಿನಲ್ಲಿಯೂ, ನ್ಯಾಯಾಲಯ ಮತ್ತು ಪೋಲಿಸರಿಂದ ತಪ್ಪಿಸಿಕೊಳ್ಳಲು ಧೈರ್ಯ ಮಾಡಿದ ಈ ವೃದ್ಧೆಗೆ ಮೆಚ್ಚಲೇಬೇಕು. ಆದ್ರೆ ವೃದ್ಧೆ ಗುರಿ ಸಾಧಿಸಲಿಲ್ಲ. ಕೆಲವು ಗಂಟೆಯಲ್ಲಿ ಆಕೆಯನ್ನು ಅಧಿಕಾರಿಗಳು ಹಿಡಿದಿದ್ದಾರೆ. ಓಡಿ ಹೋಗಲು ಶಕ್ತಿಯಿದೆ ಎಂದ ಮೇಲೆ ಮಹಿಳೆಗೆ ಜೈಲು ವಾಸಕ್ಕೂ ಶಕ್ತಿಯಿದೆ ಎಂದು ಕೋರ್ಟ್ ಮುಂದೆ ವಾದಿಸಲಾಗಿದೆ. 1939 ರಿಂದ 1945 ರವರೆಗಿನ ಎರಡನೇ ಮಹಾಯುದ್ಧದ ಸಮಯದಲ್ಲಿ, ನಾಜಿ ಶಿಬಿರದಲ್ಲಿ ಸಾವಿರಾರು ಜನರನ್ನು ಕೊಲ್ಲಲಾಗಿತ್ತು. ಆ ಸಮಯದಲ್ಲಿ ಇರ್ಮ್‌ಗಾರ್ಡ್‌ಗೆ 18 ವರ್ಷ ವಯಸ್ಸಾಗಿತ್ತು. ಶಿಬಿರದ ಕಾರ್ಯದರ್ಶಿಯಾಗಿದ್ದಳು.