ಚೀನೀ ಮೋಟಾರ್ ಸೈಕಲ್ ತಯಾರಕರು ಸ್ವಂತಿಕೆಗೆ ಹೆಸರಾಗಿಲ್ಲ. ಆದರೂ ಅವರ ಪ್ರಯತ್ನಗಳು ಕೆಲವೊಮ್ಮೆ ಶ್ಲಾಘನೀಯ. ಸದ್ಯ ಎರಡು ರೀತಿಯ ಮೋಟಾರ್ ಸೈಕಲ್ಗಳು ಮಾರುಕಟ್ಟೆಗೆ ಬರಲು ಸಿದ್ಧವಾಗಿವೆ.
ಜಿಯಾಜು ಸಿಎನ್800-ಝೆನ್ ಮತ್ತು ಸಿಎನ್ಆರ್800-ರೂಯಿ. ಒಂದು ಹೋಂಡಾ CB650R ನಿಂದ ಸ್ಫೂರ್ತಿ ಪಡೆದಿದೆ, ಎರಡನೆಯದು ಹೋಂಡಾದ
CBR650R ದಂತೆ ತೋರುತ್ತದೆ. ಎರಡೂ ಬೈಕುಗಳು ಸಾಕಷ್ಟು ಗಮನ ಸೆಳೆಯುತ್ತಿವೆ.
ಹೊಂಡಾ ದ್ವಿಚಕ್ರ ವಾಹನಗಳು ಒಂದು ಮಟ್ಟಿಗೆ ತಮ್ಮದೇ ಆದ ಶೈಲಿಯಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತವೆ. ಅವುಗಳ ಹೋಲಿಕೆಯಂತಿರುವ ವಾಹನ ಮಾರುಕಟ್ಟೆಗೆ ಬರುತ್ತಿವೆ.
ಈ ಚೀನೀ ಬೈಕುಗಳು ಡ್ಯುಯಲ್ ಚಾನೆಲ್ ABS ಜೊತೆಗೆ KYB ಶಾಕ್ ಅಬ್ಸಾರ್ಬರ್ಗಳು ಮತ್ತು ನಿಸ್ಸಿನ್ ಬ್ರೇಕ್ ಕ್ಯಾಲಿಪರ್ಗಳ ರೂಪದಲ್ಲಿ ಟಾಪ್-ಶೆಲ್ಫ್ ಹಾರ್ಡ್ವೇರ್ ಅನ್ನು ಸಹ ಹೊಂದಿವೆ.
ಬೈಕ್ಗಳು TFT ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸಹ ಹೊಂದಿದ್ದು, LCD ಸ್ಕ್ರೀನ್ ಗಿಂತ ಅಪ್ಗ್ರೇಡ್ ಆಗಿದೆ.
ಅಧಿಕೃತ ಬೆಲೆಯನ್ನು ಬಹಿರಂಗಪಡಿಸಿಲ್ಲವಾದರೂ, ಬೈಕ್ ಗಳ ಬೆಲೆ 30,000- 40,000 ಯುವಾನ್ (ಅಂದಾಜು ರೂ. 3.53- ರೂ. 4.71 ಲಕ್ಷ ) ಎಂದು ಊಹಿಸಲಾಗಿದೆ.