alex Certify ಗರ್ಭಾವಸ್ಥೆಯಲ್ಲಿ ಮಧುಮೇಹದಿಂದ ತೂಕ ಏರಿಕೆಯಾಗುತ್ತಿದೆಯಾ…? ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ ಮಾರ್ಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಾವಸ್ಥೆಯಲ್ಲಿ ಮಧುಮೇಹದಿಂದ ತೂಕ ಏರಿಕೆಯಾಗುತ್ತಿದೆಯಾ…? ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ ಮಾರ್ಗ

ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಇಷ್ಟಪಟ್ಟ ಆಹಾರವನ್ನೆಲ್ಲ ಸೇವಿಸಬೇಕು ಅನ್ನೋ ಬಯಕೆ ಆಗುತ್ತೆ. ಅಲ್ಲದೇ ಗರ್ಭಿಣಿಯಾದ ಸಂದರ್ಭದಲ್ಲಿ ಇಬ್ಬರು ತಿನ್ನುವಷ್ಟು ಆಹಾರ ಸೇವಿಸಿದ್ರೆ ಮಗು ಆರೋಗ್ಯವಾಗಿರುತ್ತೆ ಅನ್ನೋ ನಂಬಿಕೆ ಅನೇಕರಲ್ಲಿದೆ. ಆದರೆ ಇದು ತಪ್ಪು. ಅತೀ ಕ್ಯಾಲೋರಿ ಇಲ್ಲದ ಆಹಾರವನ್ನ ಸೇವಿಸುವ ಮೂಲಕವೇ ನೀವು ಆರೋಗ್ಯವಂತ ಮಗುವಿಗೆ ಜನ್ಮ ನೀಡಬಹುದು. 2ನೇ ಟ್ರೈಮಿಸ್ಟರ್​ನಲ್ಲಿ ದಿನಕ್ಕೆ 200 ಕ್ಯಾಲೋರಿ ಆಹಾರ ಒಳಹೋಗುವಂತೆ ನೋಡಿಕೊಳ್ಳಬೇಕು. ಮೂರನೇ ಟ್ರೈಮಿಸ್ಟರ್​ನಲ್ಲಿ ಇದನ್ನ 400 ಕ್ಯಾಲೋರಿಗೆ ಏರಿಕೆ ಮಾಡಿ.

ಗರ್ಭಾವಸ್ಥೆಯಲ್ಲಿ ಮಹಿಳೆಯರಲ್ಲಿ ತೂಕ ಏರಿಕೆ ಕಂಡು ಬರೋದು ಸರ್ವೇ ಸಾಮಾನ್ಯ. ದೇಹದಲ್ಲಿ ರಕ್ತದ ಅಂಶ ಹೆಚ್ಚಾಗೋದು, ಗರ್ಭದಲ್ಲಿರುವ ಮಗುವಿನ ಬೆಳವಣಿಗೆ ಇವೆಲ್ಲವೂ ತೂಕ ಏರಿಕೆಗೆ ಕಾರಣವಾಗಿದೆ. ಹಾಗಂತ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ತೂಕ ಇಳಿಕೆಯ ಡಯಟ್​ ಮಾಡೋದೂ ಕೂಡ ಸರಿಯಲ್ಲ. ಇದು ನಿಮ್ಮ ಮಗುವಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಒಡ್ಡಬಹುದು.

ಗರ್ಭಾವಸ್ಥೆಯ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ಸಕ್ಕರೆ ಅಂಶಯುಕ್ತ ಆಹಾರ ಸೇವನೆ ಮಾಡೋದನ್ನ ನಿಲ್ಲಿಸಬೇಕು. ಈ ಜಾಗದಲ್ಲಿ ಪ್ರೋಟಿನ್​ ಅಗಾಧ ಪ್ರಮಾಣದಲ್ಲಿರುವ ಆಹಾರ ಸೇವನೆ ಮಾಡಬೇಕು. ಈ ಸಂದರ್ಭದಲ್ಲಿ ನಿಮಗಿಷ್ಟದ ಕುರಕಲು ತಿಂಡಿಗಳನ್ನ ತಿನ್ನಬೇಕು ಅನ್ನೋ ಆಸೆ ಆಗೋದು ಸಹಜ.ಅವರಿಗೆ ಈ ರೀತಿಯ ಬಯಕೆ ಆಗಬಾರದು ಎಂದಾದಲ್ಲಿ ಮನೆಯಲ್ಲಿ ಇಂತಹ ತಿನಿಸುಗಳು ಗರ್ಭಿಣಿಯರಿಗೆ ಕಣ್ಣಿಗೆ ಕಾಣದಂತೆ ನೋಡಿಕೊಳ್ಳೋದು ಮನೆಯವರ ಜವಾಬ್ದಾರಿಯಾಗಿದೆ.

ಪ್ರತಿನಿತ್ಯ ವಾಕ್ ಮಾಡಿ ಹಾಗೂ ವೈದ್ಯರ ಸಲಹೆ ಪಡೆದು ವ್ಯಾಯಾಮಗಳನ್ನ ಮಾಡಿ. ದಿನಕ್ಕೆ ಕಡಿಮೆ ಅಂದರೂ ಅರ್ಧ ಗಂಟೆಗಳ ಕಾಲ ವಾಕ್​ ಮಾಡಿ. ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಸಮಸ್ಯೆ ಉಳ್ಳವರು ಗರ್ಭಾವಸ್ಥೆಯಲ್ಲಿ ತೂಕ ಏರಿಕೆ ಮಾಡಿಕೊಳ್ಳಲೇಬಾರದು. ಗರ್ಭಾವಸ್ಥೆಯಲ್ಲಿ ಮಧುಮೇಹ ಹೊಂದಿದವರು ತೂಕ ಏರಿಕೆ ಮಾಡಿಕೊಂಡಲ್ಲಿ ಇವರಿಗೆ ಜನಿಸುವ ಮಕ್ಕಳು ಮಧುಮೇಹ ಇಲ್ಲವೇ ಸ್ಥೂಲಕಾಯದ ಸಮಸ್ಯೆ ಹೊಂದಿರುವ ಸಾಧ್ಯತೆ ಅತಿಯಾಗಿ ಇರುತ್ತೆ.

ಹೀಗಾಗಿ ದೇಹದಲ್ಲಿ ಸಕ್ಕರೆ ಅಂಶ ಹಾಗೂ ರಕ್ತದೊತ್ತಡವನ್ನ ಗರ್ಭಿಣಿಯರು ಸರಿಯಾಗಿ ಇಟ್ಟುಕೊಳ್ಳಲೇಬೇಕು. ಯಾವುದೇ ಕಾರಣಕ್ಕೂ ಜಂಕ್​ಫುಡ್​ಗಳ ಸೇವನೆ ಬೇಡವೇ ಬೇಡ. ನೀವು ಆರೋಗ್ಯವಾಗಿದ್ದಷ್ಟು  ಹೊಟ್ಟೆಯಲ್ಲಿರುವ ನಿಮ್ಮ ಕಂದಮ್ಮ ಕೂಡ ಆರೋಗ್ಯವಾಗಿರಲಿದೆ ಅನ್ನೋದು ಗಮನದಲ್ಲಿರಲಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...