ಆರೋಗ್ಯವಾಗಿರಲು ಮತ್ತು ಫಿಟ್ನೆಸ್ ಕಾಪಾಡಿಕೊಳ್ಳಲು ವೈದ್ಯರು ಯಾವಾಗಲೂ ಹಣ್ಣುಗಳನ್ನು ಸೇವಿಸುವಂತೆ ಶಿಫಾರಸು ಮಾಡುತ್ತಾರೆ. ಕೆಲವು ಹಣ್ಣುಗಳು ಆರೋಗ್ಯಕ್ಕೆ ಅಪಾರ ಪ್ರಯೋಜನಗಳನ್ನು ನೀಡುತ್ತವೆ. ಇವುಗಳಲ್ಲಿ ಬಾಳೆಹಣ್ಣು ಕೂಡ ಒಂದು. ಆದರೆ ಬಾಳೆಹಣ್ಣು ತಿಂದರೆ ತೂಕ ಅಥವಾ ಬೊಜ್ಜು ಹೆಚ್ಚುತ್ತದೆ ಎಂಬ ಭಾವನೆ ಅನೇಕರಲ್ಲಿದೆ. ಬಾಳೆಹಣ್ಣು ಸೇವನೆಯಿಂದ ನಿಜವಾಗಿಯೂ ತೂಕ ಹೆಚ್ಚಾಗುತ್ತದೆಯೇ ಅಥವಾ ಇದು ಕೇವಲ ತಪ್ಪು ಕಲ್ಪನೆಯೇ ಎಂಬುದನ್ನು ತಿಳಿಯೋಣ.
ಬಾಳೆಹಣ್ಣಿನಲ್ಲಿ ಕ್ಯಾಲೊರಿಗಳ ಪ್ರಮಾಣವು ತುಂಬಾ ಹೆಚ್ಚಿರುತ್ತದೆ ಎಂಬುದು ಅನೇಕರ ನಂಬಿಕೆ. ಹಾಗಾಗಿ ಇದನ್ನು ತಿನ್ನುವುದರಿಂದ ತೂಕ ಹೆಚ್ಚಾಗಬಹುದು ಎಂದು ಭಾವಿಸುತ್ತಾರೆ. ಆದರೆ ಬಾಳೆಹಣ್ಣು ತಿನ್ನುವುದರಿಂದ ತೂಕ ಅಥವಾ ಬೊಜ್ಜು ಹೆಚ್ಚಾಗುತ್ತದೆ ಎಂಬುದು ಯಾವುದೇ ಸಂಶೋಧನೆಯಲ್ಲಿ ಸಾಬೀತಾಗಿಲ್ಲ. ತಜ್ಞರ ಪ್ರಕಾರ ಬಾಳೆಹಣ್ಣಿನಲ್ಲಿ ನಾರಿನಂಶ ಹೆಚ್ಚಿದ್ದು, ಕ್ಯಾಲೋರಿ ಪ್ರಮಾಣ ಕಡಿಮೆ ಇರುತ್ತದೆ.
ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಇದನ್ನು ಸೇವಿಸಬಹುದು. ನಾರಿನಂಶವಿರುವ ಕಾರಣ ಬಾಳೆಹಣ್ಣು ಹೊಟ್ಟೆಯನ್ನು ದೀರ್ಘಕಾಲ ಭರ್ತಿ ಮಾಡಿಡುತ್ತದೆ. ಇದನ್ನು ತಿಂದರೆ ಜೀರ್ಣಕ್ರಿಯೆಯ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಪೌಷ್ಟಿಕಾಂಶದ ವಿಷಯದಲ್ಲಿಯೂ ಈ ಹಣ್ಣನ್ನು ಮೀರಿಸುವವರಿಲ್ಲ. ಬಾಳೆಹಣ್ಣಿನಲ್ಲಿ ಅನೇಕ ಅಗತ್ಯ ಪೋಷಕಾಂಶಗಳು ಕಂಡುಬರುತ್ತವೆ.
ಅವು ಕ್ಯಾರೊಟಿನಾಯ್ಡ್‌ಗಳು, ಫೀನಾಲಿಕ್ಸ್, ಫೈಟೊಸ್ಟೆರಾಲ್‌ಗಳು ಮತ್ತು ಬಯೋಜೆನಿಕ್ ಅಮೈನ್‌ಗಳಂತಹ ಅನೇಕ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿರುತ್ತವೆ. ಪೊಟ್ಯಾಸಿಯಮ್ ಜೊತೆಗೆ ವಿಟಮಿನ್ ಎ, ಬಿ6 ಮತ್ತು ಸಿ ಕೂಡ ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ. ಅತಿಸಾರ ಮತ್ತು ಭೇದಿಯಿಂದ ಬಳಲುತ್ತಿರುವವರಿಗೂ ಈ ಹಣ್ಣು ತುಂಬಾ ಪ್ರಯೋಜನಕಾರಿ. ಬಾಳೆಹಣ್ಣುಗಳು ಎಂಟಿಸಿಡ್ ಪರಿಣಾಮಗಳಿಗೆ ಹೆಸರುವಾಸಿಯಾಗಿದೆ. ಇದನ್ನು ಸೇವಿಸುವುದರಿಂದ ಆರೋಗ್ಯದ ಜೊತೆಗೆ ತ್ವಚೆ ಮತ್ತು ಕೂದಲಿಗೆ ಹಲವಾರು ಲಾಭಗಳು ಸಿಗುತ್ತವೆ.