ತೂಕ ಏರಿಕೆ ಸದ್ಯ ಬಹುತೇಕರನ್ನು ಕಾಡುವ ದೊಡ್ಡ ಸಮಸ್ಯೆ. ತೂಕ ಇಳಿಕೆಗೆ ಪ್ರತಿ ದಿನ ಕಸರತ್ತು ಮಾಡುವವರಿದ್ದಾರೆ. ತೂಕದ ಬಗ್ಗೆ ಸರಿಯಾದ ಜ್ಞಾನ ಇರಬೇಕು. ಇಲ್ಲವಾದ್ರೆ ಅನಗತ್ಯ ಡಯಟ್, ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ.
ಆರೋಗ್ಯವಂತ ವ್ಯಕ್ತಿಯ ತೂಕ, ವಯಸ್ಸು ಮತ್ತು ಎತ್ತರ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ತಜ್ಞರ ಪ್ರಕಾರ, ಎತ್ತರಕ್ಕೆ ಅನುಗುಣವಾಗಿ ತೂಕದ ಸಮತೋಲನವು ಉತ್ತಮ ಆರೋಗ್ಯದ ಮಾನದಂಡವಾಗಿದೆ. ಎತ್ತರ, ವಯಸ್ಸಿಗೆ ತಕ್ಕಂತೆ ತೂಕವನ್ನು ಲೆಕ್ಕ ಹಾಕಬೇಕು.
4 ಅಡಿ 10 ಇಂಚು ಎತ್ತರವಿರುವ ವ್ಯಕ್ತಿಯ ಸಾಮಾನ್ಯ ತೂಕ 41 ರಿಂದ 52 ಕೆಜಿ ಇರಬೇಕು. ಇದಕ್ಕಿಂತ ಹೆಚ್ಚು ತೂಕವಿದ್ದರೆ ಅದನ್ನು ಕಡಿಮೆ ಮಾಡಿಕೊಳ್ಳುವುದು ಅಗತ್ಯ.
5 ಅಡಿ ಎತ್ತರವಿರುವ ವ್ಯಕ್ತಿಯ ಸಾಮಾನ್ಯ ತೂಕ 44 ರಿಂದ 55.7 ಕೆಜಿ ನಡುವೆ ಇರಬೇಕು. ಇದು ಆರೋಗ್ಯಕರ ದೇಹದ ಸಂಕೇತವಾಗಿದೆ.
5 ಅಡಿ 2 ಇಂಚು ಎತ್ತರವಿರುವ ವ್ಯಕ್ತಿಯ ತೂಕ 49 ರಿಂದ 63 ಕೆಜಿ ನಡುವೆ ಇರಬೇಕು.
5 ಅಡಿ 4 ಇಂಚು ಎತ್ತರವಿರುವ ವ್ಯಕ್ತಿಯ ಸಾಮಾನ್ಯ ತೂಕ 49 ರಿಂದ 63 ಕೆಜಿ ಇರಬೇಕು.
5 ಅಡಿ 6 ಇಂಚು ಎತ್ತರವಿರುವ ವ್ಯಕ್ತಿಯ ಸಾಮಾನ್ಯ ತೂಕ 53 ರಿಂದ 67 ಕೆಜಿ ಇರಬೇಕು.
5 ಅಡಿ 8 ಇಂಚು ಎತ್ತರವಿರುವ ವ್ಯಕ್ತಿಯ ಸಾಮಾನ್ಯ ತೂಕ 56 ರಿಂದ 71 ಕೆಜಿ ನಡುವೆ ಇರಬೇಕು.
5 ಅಡಿ 10 ಇಂಚು ಎತ್ತರವಿರುವ ವ್ಯಕ್ತಿಯ ಸಾಮಾನ್ಯ ತೂಕ 59 ರಿಂದ 75 ಕೆಜಿ ನಡುವೆ ಇರಬೇಕು.
6 ಅಡಿ ಎತ್ತರವಿರುವ ವ್ಯಕ್ತಿಯ ಸಾಮಾನ್ಯ ತೂಕ 63 ರಿಂದ 80 ಕೆಜಿ ಒಳಗಿರಬೇಕು.