ಇತ್ತೀಚಿನ ದಿನಗಳಲ್ಲಿ ಭಾರತೀಯ ಧಾರಾವಾಹಿಗಳ ಕೆಲವು ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಗೆ ಒಳಗಾಗಿವೆ. ಭಾರತೀಯ ದೂರದರ್ಶನದ ಧಾರಾವಾಹಿಗಳು ಜನರನ್ನು ಗೊಂದಲಕ್ಕೀಡು ಮಾಡುತ್ತದೆ. ಅದು ಶೀಘ್ರದಲ್ಲೇ ನಿಲ್ಲುವಂತೆ ತೋರುತ್ತಿಲ್ಲ.
ಇದೀಗ, ಪ್ರಸಿದ್ಧ ಬಂಗಾಳಿ ಧಾರಾವಾಹಿಯ ಆಯೆ ತೋಬೆ ಸೊಹೊಚೋರಿಯ ದೃಶ್ಯವು ಸಾಮಾಜಿಕ ಮಾಧ್ಯಮದಲ್ಲಿ ಕ್ರೇಜಿ ವೈರಲ್ ಆಗಿದೆ. ಮದುವೆಯ ವೇದಿಕೆಯಲ್ಲಿ ವಧು-ವರ ಹಾರ ಹಿಡಿದುಕೊಂಡು ನಿಂತಿದ್ದಾರೆ. ಇನ್ನೇನು ವಧು ಹಾರ ಹಾಕುತ್ತಿದ್ದಾಳೆ ಎಂದಾಗ, ವರನನ್ನು ತಳ್ಳಿದ ವ್ಯಕ್ತಿಯೊಬ್ಬ ಆ ಸ್ಥಳಕ್ಕೆ ಬಂದಿದ್ದಾನೆ. ಈ ವೇಳೆ ಹಾರ ನೇರ ಆ ವ್ಯಕ್ತಿಯ ಕುತ್ತಿಗೆಗೆ ಬಿದ್ದಿದೆ.
ಮದುವೆಯಲ್ಲಿ ಭಾಗವಹಿಸಿದವರೆಲ್ಲಾ ಸ್ಥಂಭೀಭೂತರಾಗಿ ನೋಡುತ್ತಿದ್ದಂತೆ, ಆ ವ್ಯಕ್ತಿ ವಧುವಿನ ಒಪ್ಪಿಗೆಯಿಲ್ಲದೆ ಹೂಮಾಲೆಯನ್ನು ಹಾಕುತ್ತಾನೆ. ಅಷ್ಟೇ ಅಲ್ಲ ಆಕೆಯ ಹಣೆಗೆ ಸಿಂಧೂರವನ್ನು ಸಹ ಇಡುತ್ತಾನೆ. ಅಲ್ಲಿದ್ದವರೆಲ್ಲಾ ಗಾಬರಿಯಿಂದ ಏನಾಯಿತು ಎಂದು ನೋಡುತ್ತಾ ನಿಂತಿದ್ದಾರೆ.
ದೂರದರ್ಶನ ಕಾರ್ಯಕ್ರಮದ ಈ ದೃಶ್ಯವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಈ ದೃಶ್ಯ ನೋಡಿ ಟ್ರೋಲ್ ಮಾಡಿದ್ದಾರೆ. ಕೆಲವರು, ತರ್ಕಬದ್ಧವಲ್ಲದ ಮತ್ತು ಅಸಂಬದ್ಧವಾದ ದೃಶ್ಯವನ್ನು ಟೀಕಿಸಿದ್ದಾರೆ. ಈ ವಿಡಿಯೋವನ್ನು ಬಳಕೆದಾರರು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ನಿರಂತರವಾಗಿ ಹಂಚಿಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ, ಇದು 3 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ.