ಹಿಟ್ಟು-ಬಟ್ಟೆಗೆ ಕಷ್ಟವಿದ್ದರೂ ಮದುವೆ ಮಾತ್ರ ಆದಷ್ಟು ಜೋರಾಗೇ ಮಾಡಬೇಕು ಎಂಬುದು ಬಹುತೇಕ ಭಾರತೀಯರ ಬಯಕೆ. ಇತ್ತೀಚಿನ ದಿನಗಳಲ್ಲಿ ತಮ್ಮ ಮದುವೆ ಅದೆಷ್ಟು ಗ್ರಾಂಡ್ ಎಂದು ತೋರಿಸಿಕೊಳ್ಳಲು ಜನರು ಛಾಯಾಗ್ರಾಹಣಕ್ಕೆ ಬಹಳ ಒತ್ತು ಕೊಡುತ್ತಿದ್ದಾರೆ.
ಅದರಲ್ಲೂ ಪ್ರೀವೆಡ್ಡಿಂಗ್ ಫೋಟೋಶೂಟ್ ಎಂಬ ಟ್ರೆಂಡ್ ಬಂದ ಮೇಲೆ ಮದುವೆಯ ಶಾಸ್ತ್ರಗಳಿಗಿಂತ ಫೋಟೋಶೂಟ್‌ಗೇ ಹೆಚ್ಚಿನ ಮಹತ್ವ ಎಂಬಂತಾಗಿಬಿಟ್ಟಿದೆ. ಔಟ್‌ಡೋರ್ ಶೂಟಿಂಗ್ ಹೆಸರಿನಲ್ಲಿ ಮದುವೆಯ ಛಾಯಾಗ್ರಾಹಕರು ನೂತನ ವಧೂವರರನ್ನು ಥರಾವರಿ ಲೊಕೇಷನ್‌ಗಳಿಗೆ ಕರೆದೊಯ್ಯುವುದು ಸಹಜವಾಗಿದೆ.
SHOCKING NEWS: ಡೆಲ್ಟಾ ಅಟ್ಟಹಾಸಕ್ಕೆ ವಿಜಯಪುರದಲ್ಲಿ 280 ಜನ ಬಲಿ…?
ಇಂಥದ್ದೇ ಘಟನೆಯೊಂದರಲ್ಲಿ, ಅದಾಗ ತಾನೇ ಗೃಹಸ್ಥಾಶ್ರಮ ಪ್ರವೇಶದ ಶಪಥಗೈದು ಬರುತ್ತಿದ್ದ ನವದಂಪತಿಗಳ ಫೋಟೋ/ವಿಡಿಯೋವನ್ನು ಶೂಟ್ ಮಾಡುವುದರಲ್ಲಿ ವಿಪರೀತ ಮುಳುಗಿಹೋಗಿದ್ದ ಛಾಯಾಗ್ರಾಹಕನನ್ನು ಸ್ವಿಮ್ಮಿಂಗ್ ಪೂಲ್‌ನಿಂದ ಮೇಲೆತ್ತಿತ್ತಿರುವುದನ್ನು ನೋಡಿ ಖುದ್ದು ನವಜೋಡಿಯೇ ಶಾಕ್ ಆಗಿದೆ.
https://www.youtube.com/watch?v=R_RggyFHNMI