ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಮದುವೆಗೆ ಬಂದ ಅತಿಥಿಗಳು ಸಮಾರಂಭ ನಡೆಯುವ ಸ್ಥಳಕ್ಕೆ ಪ್ರವೇಶಿಸುವ ಮೊದಲು ತಮ್ಮ ಆಧಾರ್ ಕಾರ್ಡ್ಗಳನ್ನು ತೋರಿಸಲು ಕೇಳಲಾಗಿದೆ.
ಅಮ್ರೋಹಾದ ಹಸನ್ಪುರದಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಅತಿಥಿಗಳನ್ನು ನೋಡಿದ ನಂತರ ವಧುವಿನ ಕಡೆಯವರು ಸ್ವಲ್ಪ ಚಿಂತಿತರಾಗಿದ್ದಾರೆ. ಆದ್ದರಿಂದ, ಅವರು ಸ್ಥಳವನ್ನು ಪ್ರವೇಶಿಸುವ ಮೊದಲು ತಮ್ಮ ಆಧಾರ್ ಕಾರ್ಡ್ಗಳನ್ನು ತೋರಿಸಲು ಅತಿಥಿಗಳನ್ನು ಕೇಳಿದ್ದಾರೆ.
ಪುರಾವೆ ತೋರಿಸಲು ಸಾಧ್ಯವಾದ ಜನರು ಪ್ರವೇಶಕ್ಕೆ ಅನುಮತಿ ಪಡೆದರೆ, ಸಾಧ್ಯವಾಗದವರು ವೀಡಿಯೊವನ್ನು ರೆಕಾರ್ಡ್ ಮಾಡಿದರು.
ದಿಬ್ಬಣವು ಧವಸಿರ್ ಗ್ರಾಮದಿಂದ ಹಸನಪುರಕ್ಕೆ ಬಂದಿತ್ತು. ಭಾರೀ ಜನಸಂದಣಿಯನ್ನು ನೋಡಿದ ನಂತರ ವಧುವಿನ ಕುಟುಂಬವು ವರನ ಕಡೆಯಿಂದ ಬಂದ ಅತಿಥಿಗಳನ್ನು ಪ್ರವೇಶಿಸುವ ಮೊದಲು ತಮ್ಮ ಆಧಾರ್ ಕಾರ್ಡ್ಗಳನ್ನು ತೋರಿಸಲು ಕೇಳಿದರು. ಆಧಾರ್ ಕಾರ್ಡ್ ತೋರಿಸಿದವರಿಗೆ ಊಟ ಹಾಕಿ ಕಳಿಸಲಾಯಿತು, ಸಾಧ್ಯವಾಗದವರು ಹಿಂತಿರುಗಿದರು.
ವರದಿಗಳ ಪ್ರಕಾರ ಸೆಪ್ಟೆಂಬರ್ 21 ರಂದು ಒಂದೇ ಸ್ಥಳಕ್ಕೆ ಎರಡು ದಿಬ್ಬಣ ಬಂದಿವೆ. ಒಂದು ಸಮಯದಲ್ಲಿ ಊಟ ಬಡಿಸಲು ಪ್ರಾರಂಭಿಸಿದಾಗ ಇನ್ನೊಂದು ದಿಬ್ಬಣದಲ್ಲಿದ್ದ ಜನರೂ ಸಹ ಊಟಕ್ಕೆ ನುಗ್ಗಿದ್ದರು.
ಗೊಂದಲದ ನಡುವೆ, ವಧುವಿನ ಕುಟುಂಬವು ಅಸಮಾಧಾನಗೊಂಡಿದ್ದು, ಮತ್ತು ಊಟ ನೀಡುವುದನ್ನು ನಿಲ್ಲಿಸಲು ನಿರ್ಧರಿಸಿತು. ಜನಸಂದಣಿಯನ್ನು ನಿರ್ವಹಿಸಲು ಆಧಾರ್ ಕಾರ್ಡ್ ತೋರಿಸುವ ಷರತ್ತನ್ನು ಮುಂದಿಟ್ಟಿದ್ದು, ಆದರೆ ಆ ಸಮಯದಲ್ಲಿ ಗುರುತಿನ ಪುರಾವೆಗಳಿಲ್ಲದ ಕಾರಣ ಮದುವೆಯ ನಿಜವಾದ ಅತಿಥಿಗಳು ಕೂಡ ಸಿಕ್ಕಿಕೊಂಡರು.