ತತ್ಕಾಲ್ ಪೋಡಿ, ಭೂ ಪರಿವರ್ತನೆಗಾಗಿ ರೈತರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ‘ಸ್ವಾವಲಂಬಿ’ ವೆಬ್ಸೈಟ್ ಸಹಕಾರಿಯಾಗಿದೆ.
ರೈತರು ಈ ವೆಬ್ಸೈಟ್ ಮೂಲಕ ಜಮೀನಿನ ಹಿಸ್ಸಾ, ನಕಾಶೆ, ತತ್ಕಾಲ್ ಪೋಡಿ, ಭೂ ಪರಿವರ್ತನೆ ನಕ್ಷೆ ಮೊದಲಾದವುಗಳನ್ನು ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಯಾದ 7 ದಿನಗಳ ಒಳಗೆ ದಾಖಲೆಗಳು ರೈತರ ಕೈ ಸೇರಲಿವೆ.
ಈ ವೆಬ್ಸೈಟ್ ಆರಂಭವಾದಾಗಿನಿಂದ ರಾಜ್ಯಾದ್ಯಂತ ಸಹಸ್ರಾರು ಅರ್ಜಿಗಳು ಸಲ್ಲಿಕೆಯಾಗಿ ಶೇಕಡ 70 ಅಧಿಕ ಅರ್ಜಿಗಳು ವಿಲೇವಾರಿಯಾಗಿವೆ. ಭೂಮಾಪನ ಇಲಾಖೆಯ ‘ಮೋಜಣಿ’ ಹಾಗೂ ಉಪನೋಂದಣಿ ಇಲಾಖೆಯ ‘ಕಾವೇರಿ’ ತಂತ್ರಾಂಶಕ್ಕೆ ‘ಸ್ವಾವಲಂಬಿ’ ವೆಬ್ಸೈಟ್ ಲಿಂಕ್ ಮಾಡಲಾಗಿದೆ. rdservices.karnataka.gov.in ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಿ ಸೇವೆ ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ.