ಬೆಂಗಳೂರು: ಹರ್ಷ ಮಕಾನ, ಅಶ್ವಿನ್ ಮಂಡೋತ್ ಮತ್ತು ತಾನ್ವಿ ಬಿ.ಟಿ. ಎಂಬುವವರು ಅಭಿವೃದ್ಧಿಪಡಿಸಿದ ವೆಬ್ಸೈಟ್ ಸೋಂಕಿತರ ಚಿಕಿತ್ಸೆ ಸೌಲಭ್ಯಗಳ ಮಾಹಿತಿ ನೀಡಲಿದೆ.
ಆಸ್ಪತ್ರೆಯಲ್ಲಿ ಖಾಲಿ ಇರುವ ಬೆಡ್, ಅಂಬುಲೆನ್ಸ್, ಆಕ್ಸಿಜನ್, ಕೊರೊನಾ ಸೋಂಕಿತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಎಲ್ಲ ಮಾಹಿತಿಗಳು, ಆಮ್ಲಜನಕ ಪೂರೈಕೆ ಸಂಸ್ಥೆಗಳ ಮಾಹಿತಿ, ಹೋಂ ಐಸೋಲೇಷನ್ ನಲ್ಲಿ ಇರುವವರಿಗೆ ಆಹಾರ ಪೂರೈಕೆ, ಬಿಬಿಎಂಪಿ ವಾರ್ ರೂಮ್, ರಾಜ್ಯ ಸರ್ಕಾರದ ಹೆಲ್ಪ್ ಲೈನ್, ಪ್ಲಾಸ್ಮಾ ದಾನಿಗಳ ವಿವರ ಮತ್ತು ನೋಂದಣಿ ಸೇರಿದಂತೆ ಹಲವು ಮಾಹಿತಿ ಒಳಗೊಂಡ ಈ ವೆಬ್ಸೈಟ್ ಸೋಂಕಿತರ ಸಮಸ್ಯೆಗೆ ನೆರವು ನೀಡಲಿದೆ. ಮಾಹಿತಿಗಾಗಿ http://linkfly.to/covidbengaluru ಗಮನಿಸಬಹುದಾಗಿದೆ ಎಂದು ಹೇಳಲಾಗಿದೆ.