ಶಿವನಿಗೆ ವಿಭೂತಿ ಬಹಳ ಪ್ರಿಯವಾದುದು. ಶಿವ ಯಾವಾಗಲೂ ತನ್ನ ಹಣೆ ಹಾಗೂ ದೇಹದ ಮೇಲೆ ವಿಭೂತಿಯನ್ನು ಧಾರಣೆ ಮಾಡುತ್ತಾನೆ. ಹಾಗಾಗಿ ಶಿವ ಪೂಜೆ ಮಾಡುವಾಗ ವಿಭೂತಿ ಹಚ್ಚದೆ ಯಾವುದೇ ಕಾರಣಕ್ಕೂ ಪೂಜೆ ಮಾಡಬಾರದು. ಆದಕಾರಣ ಶಿವರಾತ್ರಿಯಂದು ಶಿವನ ಪೂಜೆ ಮಾಡುವಾಗ ಈ ರೀತಿ ವಿಭೂತಿ ಧರಿಸಿದರೆ ನಿಮ್ಮ ಪಾಪಕರ್ಮಗಳು ಕಳೆದು ಸುಖಕರವಾದ ಜೀವನ ಪ್ರಾಪ್ತಿಯಾಗುತ್ತದೆ.
ಪುರುಷರು ವಿಭೂತಿಯನ್ನು ಹಣೆಗೆ ಧರಿಸುವಾಗ ನೀರಿನಲ್ಲಿ ಮಿಕ್ಸ್ ಮಾಡಿ ಧರಿಸಿ. ಆದರೆ ಮಹಿಳೆಯರು ಪುಡಿಯಾಗಿರುವ ವಿಭೂತಿಯನ್ನು ಧರಿಸಿ. ಹಾಗೇ ಶಿವನಿಗೆ ವಿಭೂತಿ ಬೆರೆಸಿದ ನೀರಿನಿಂದ ಅಭಿಷೇಕ ಮಾಡಿ. ಇದರಿಂದ ಶಿವನ ಅನುಗ್ರಹ ದೊರೆಯುತ್ತದೆ.
ಹಾಗೇ ವಿಭೂತಿ ಧರಿಸುವಾಗ “ಶ್ರೀಕರಂಚ ಪವಿತ್ರಂಚ ಶೋಕ ರೊಗ ನಿವಾರಣಂ, ಲೋಕೆ ವಶಿಕರಂ ಪುಂಸಾಂ ಭಸ್ಮತ್ರೈಲೋಕ್ಯಪಾವನಂ” ಎಂಬ ಶ್ಲೋಕವನ್ನು ಪಠಿಸಿದರೆ ಜೀವನದಲ್ಲಿ ಏಳಿಗೆಯಾಗುತ್ತದೆ.
ಹಾಗೇ ಮಹಾಶಿವರಾತ್ರಿಯಂದು ದೇವಾಯಕ್ಕೆ ತೆರಳಿ ದೇವರ ದರ್ಶನ ಪಡೆದು ಮನೆಗೆ ಬಂದು ಜಾಗರಣೆ ಮಾಡಿದರೆ ವಿಶೇಷ ಫಲಗಳು ಸಿಗುತ್ತದೆ ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ.