ಹೆಲ್ಮೆಟ್ ಎಂಬ ಜೀವರಕ್ಷಕದ ಬಗ್ಗೆ ಅದೆಷ್ಟೇ ಜಾಗೃತಿ ಮೂಡಿಸಿದರು ಉದಾಸೀನ ಇದ್ದೇ ಇದೆ. ಈ ಉದಾಸೀನ ಕೇವಲ ಯುವ ಸಮುದಾಯದಲ್ಲಿ ಮಾತ್ರ ಇಲ್ಲ, ಜವಾಬ್ದಾರಿಯುತ ವಯಸ್ಕರು ಈ ವಿಚಾರದಲ್ಲಿ ಗಂಭೀರವಾಗಿ ಯೋಚಿಸುವುದಿಲ್ಲ.
ಹೆಲ್ಮೆಟ್ ಕಡ್ಡಾಯ ಮಾಡಿದಾಗ ಅಥವಾ ದಂಡದ ಮೊತ್ತ ಏರಿಸಿದಾಗ ಮಾತ್ರ ಜನ ಮುಗಿಬಿದ್ದು ಖರೀದಿಸುವುದುಂಟು. ಆದರೆ ಈ ಖರೀದಿಯಲ್ಲೂ ಕಣ್ಣೊರೆಸುವ ತಂತ್ರ. ಕಡಿಮೆ ಬೆಲೆಯ ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸಿ ಬೀದಿಗಿಳಿಯುವ ಜನರೇ ಹೆಚ್ಚು.
ಯಾವಾಗಲೂ ಹೆಲ್ಮೆಟ್ ಖರೀದಿ ಮಾಡುವಾಗ ಐಎಸ್ಐ ಗುರುತು ಇರುವ ಹೆಲ್ಮೆಟ್ ಖರೀದಿ ಮಾಡಿ.
ಹೆಲ್ಮೆಟ್ ಜೀವರಕ್ಷಕ. ಕೇವಲ ತಲೆ ಮುಚ್ಚುವ ಹೆಲ್ಮೆಟ್ ಕೊಳ್ಳುವುದು ಒಳ್ಳೆಯದಲ್ಲ. ಕಿವಿ ಮುಚ್ಚುವಂತಹ ಹೆಲ್ಮೆಟ್ ಕೊಂಡುಕೊಳ್ಳಿ.
ಹೆಲ್ಮೆಟ್ ಧರಿಸಿದ ಮೇಲೆ, ಅದನ್ನು ಸರಿಯಾಗಿ ಲಾಕ್ ಮಾಡಿ. ಇಲ್ಲದೆ ಹೋದರೆ ಸುಲಭವಾಗಿ ಹೆಲ್ಮೆಟ್ ತಲೆಯಿಂದ ಹೊರಬರಬಹುದು.
ಶಾಲೆಗೆ ಮಕ್ಕಳನ್ನು ಡ್ರಾಪ್ ಮಾಡುವಾಗ ಪುಟ್ಟ ಮಕ್ಕಳಿಗೂ ಹೆಲ್ಮೆಟ್ ಧರಿಸಲು ಹೇಳಿ.