ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುತ್ತದೆ. ಹಾಗಾಗಿ ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಎಷ್ಟೇ ತಯಾರಿ ಮಾಡಿಕೊಂಡರೂ ಸ್ಟೈಲ್ ವಿಚಾರಕ್ಕೆ ಚಳಿಯೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಇಷ್ಟದ ಬಟ್ಟೆಗಳನ್ನು ಬಿಟ್ಟು ಓವರ್ ಲೇಯರ್ ಬಟ್ಟೆಗಳನ್ನು ಧರಿಸಬೇಕಾಗುತ್ತದೆ.
ಹಾಗಾಗಿ ನೀವು ಮದುವೆ ಸಮಾರಂಭದಲ್ಲಿ ಸ್ಟೈಲಿಶ್ ಆಗಿ ಕಾಣಲು ಮತ್ತು ಚಳಿಯಿಂದ ರಕ್ಷಣೆ ಸಿಗಲು ಈ ಸಲಹೆಗಳನ್ನು ಪಾಲಿಸಿ.
ಲೆಗ್ ವಾರ್ಮರ್ ಗಳು : ನೀವು ಲೆಹಂಗಾ ಮತ್ತು ಸೀರೆಗಳನ್ನು ಧರಿಸುತ್ತಿದ್ದರೆ ಚಳಿಯಿಂದ ಪಾದಗಳನ್ನು ರಕ್ಷಿಸಲು ಲೆಗ್ ವಾರ್ಮರ್ ಗಳು ಅತ್ಯಗತ್ಯ. ಇದು ನಿಮ್ಮ ಪಾದಗಳನ್ನು ಶೀತದಿಂದ ರಕ್ಷಿಸುತ್ತದೆ.
ಬ್ಲೇಜರ್ : ಬೆನ್ನು ಮತ್ತು ಕತ್ತಿನ ಭಾಗವನ್ನು ಚಳಿಯಿಂದ ರಕ್ಷಿಸುವುದು ತುಂಬಾ ಕಷ್ಟ. ಈ ಸಂದರ್ಭಗಳಲ್ಲಿ ಬ್ಲೇಜರ್ ಗಳನ್ನು ಧರಿಸಿ. ಚಳಿಗಾಲದಲ್ಲಿ ನಿಮಗೆ ಉಣ್ಣೆಯ ಬ್ಲೇಜರ್ ಅಥವಾ ಯಾವುದೇ ದಪ್ಪ ಬಟ್ಟೆಯ ಅಗತ್ಯವಿರುತ್ತದೆ.
ವೆಲ್ವೆಟ್ : ಚಳಿಗಾಲದ ಮದುವೆಯಲ್ಲಿ ವೆಲ್ವೆಟ್ ಫ್ಯಾಬ್ರಿಕ್ ನಿಮಗೆ ಸ್ಟೈಲಿಶ್ ಲುಕ್ ನೀಡುವುದು ಮಾತ್ರವಲ್ಲ ನಿಮಗೆ ಚಳಿಯಾಗುವುದಿಲ್ಲ. ನೀವು ವೆಲ್ವೆಟ್ ಡ್ರೆಸ್ ಹೊಂದಿಲ್ಲದಿದ್ದರೆ ನೀವು ಈ ಬಟ್ಟೆಯಲ್ಲಿ ಕಾರ್ಡಿಜನ್ ಅನ್ನು ಸಹ ತೆಗೆದುಕೊಳ್ಳಬಹುದು.