ಶಿವನ ಕೃಪೆ ಲಭಿಸಿ ನಿಮ್ಮ ಶೋಭೆ ಹೆಚ್ಚಿಸಲು ರಾಶಿ ಪ್ರಕಾರ ಧರಿಸಿ ರುದ್ರಾಕ್ಷಿ 29-07-2024 4:10AM IST / No Comments / Posted In: Latest News, Live News, Astro ರುದ್ರಾಕ್ಷಿ ಧರಿಸಿದ್ರೆ ಶಿವನ ಕೃಪೆ ಭಕ್ತನ ಮೇಲಿರುತ್ತದೆಯಂತೆ. ರುದ್ರಾಕ್ಷಿ ವ್ಯಕ್ತಿಯ ಶೋಭೆಯನ್ನು ಹೆಚ್ಚಿಸುತ್ತದೆ. ರುದ್ರಾಕ್ಷಿ ಧರಿಸಲೂ ವಿಧಾನವಿದೆ. ರಾಶಿಗೆ ತಕ್ಕಂತೆ ರುದ್ರಾಕ್ಷಿ ಧರಿಸಿದ್ರೆ ಒಳ್ಳೆಯದು. ಮೇಷ : ಮೇಷ ರಾಶಿಯವರು ಮೂರು ಮುಖವುಳ್ಳ ರುದ್ರಾಕ್ಷಿಯನ್ನು ಧರಿಸಬೇಕು. ವೃಷಭ : ಈ ರಾಶಿಯವರು ಆರು ಮುಖವುಳ್ಳ ರುದ್ರಾಕ್ಷಿ ಧರಿಸಬೇಕು. ಮಿಥುನ : ನಾಲ್ಕು ಮುಖವುಳ್ಳ ರುದ್ರಾಕ್ಷಿ ಧಾರಣೆ ಒಳ್ಳೆಯದು. ಕರ್ಕ : ಎರಡು ಮುಖವುಳ್ಳ ರುದ್ರಾಕ್ಷಿ ಧರಿಸಬೇಕು. ಸಿಂಹ : ಸಿಂಹ ರಾಶಿಯವರು ಹನ್ನೆರಡು ಮುಖವುಳ್ಳ ರುದ್ರಾಕ್ಷಿಯನ್ನು ಧಾರಣೆ ಮಾಡಬೇಕು. ಕನ್ಯಾ : ಕನ್ಯಾ ರಾಶಿಯವರು ಗೌರಿಶಂಕರ ರುದ್ರಾಕ್ಷಿಯನ್ನು ಧರಿಸಬೇಕು. ತುಲಾ : ಈ ರಾಶಿಯವರು ಏಳು ಮುಖವುಳ್ಳ ರುದ್ರಾಕ್ಷಿಯನ್ನು ಧಾರಣೆ ಮಾಡಬೇಕು. ವೃಶ್ಚಿಕ : ಈ ರಾಶಿಯವರು ಕೂಡ ಮೂರು ಮುಖವುಳ್ಳ ರುದ್ರಾಕ್ಷಿಯನ್ನು ಧರಿಸಬೇಕು. ರಾಶಿಯವರ ಆರ್ಥಿಕ ಸಂಕಷ್ಟವನ್ನು ಇದು ದೂರ ಮಾಡುತ್ತದೆ. ಧನು : ಧನು ರಾಶಿಯವರು ಪಂಚಮುಖಿ ರುದ್ರಾಕ್ಷಿಯನ್ನು ಧರಿಸಬೇಕು. ಮನೆಯಲ್ಲಿ ಸುಖ-ಶಾಂತಿ ಮನೆ ಮಾಡುವ ಜೊತೆಗೆ ಯಶಸ್ಸು ಪ್ರಾಪ್ತಿಯಾಗುತ್ತದೆ. ಮಕರ : ಈ ರಾಶಿಯವರು ಏಳು ಮುಖವುಳ್ಳ ರುದ್ರಾಕ್ಷಿಯನ್ನು ಧರಿಸಬೇಕು. ಶಿವನ ಕೃಪೆ ಈ ರಾಶಿಯವರ ಮೇಲಿರುತ್ತದೆ. ಕುಂಭ : ಈ ರಾಶಿಯವರು ಮೂರು ಮುಖವುಳ್ಳ ರುದ್ರಾಕ್ಷಿ ಧರಿಸಬೇಕು. ಮೀನ : ಪಂಚಮುಖಿ ರುದ್ರಾಕ್ಷಿ ಧರಿಸಿದ್ರೆ ಈ ರಾಶಿಯವರಿಗೆ ಸಾಕಷ್ಟು ಲಾಭವಾಗಲಿದೆ. – ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿ ಜ್ಯೋತಿಷ್ಯ ಪೀಠಂ ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ – ಪ್ರೇಮ, ದಾಂಪತ್ಯ, ವೈವಾಹಿಕ, ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋಕ್ತವಾದ ಮಾರ್ಗವನ್ನು ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ. ತಪ್ಪದೆ ಕರೆ ಮಾಡಿ: ಪಂಡಿತ್ ಕೇಶವ್ ಕೃಷ್ಣ ಭಟ್ (ಜ್ಯೋತಿಷ್ಯ ಶಾಸ್ತ್ರಜ್ಞರು) 8971498358