ಬಂಗಾರ ಧರಿಸೋದು ಶುಭಕರ. ಇತ್ತೀಚೆಗೆ ಬಂಗಾರದ ಆಭರಣ ಧರಿಸೋದು ಫ್ಯಾಷನ್ ಆಗಿದೆ. ಪ್ರತಿ ಮಹಿಳೆಯೂ ಬಂಗಾರದ ಮೇಲೆ ಪ್ರೀತಿ ಹೊಂದಿರುತ್ತಾಳೆ. ಚಿನ್ನ ಮಂಗಳಕರ, ಫ್ಯಾಷನ್ ಒಂದೇ ಅಲ್ಲ ಆರೋಗ್ಯಕ್ಕೂ ಒಳ್ಳೆಯದು.
ಯಸ್, ಪ್ರಾಚೀನ ಕಾಲದಿಂದಲೂ ಕೆಲ ರೋಗ ಗುಣಪಡಿಸಲು ಚಿನ್ನವನ್ನು ಬಳಸುತ್ತ ಬರಲಾಗಿದೆ. ಚಿನ್ನ ಖಿನ್ನತೆ, ಸಂಧಿವಾತದಂತಹ ಖಾಯಿಲೆಗಳನ್ನು ಕಡಿಮೆ ಮಾಡುತ್ತದೆ ಎಂದ್ರೆ ನೀವು ನಂಬಲೇಬೇಕು.
24 ಕ್ಯಾರೆಟ್ ಶುದ್ಧ ಚಿನ್ನವನ್ನು ಗಾಯ ಅಥವಾ ಸೋಂಕಿನ ಮೇಲಿಟ್ಟರೆ ಗಾಯ ಬೇಗ ಗುಣವಾಗುತ್ತದೆ. ಚಿನ್ನ ಬೆಚ್ಚಗಿನ ಅನುಭವ ನೀಡುತ್ತದೆ ಎಂದು ಪ್ರಾಚೀನ ಕಾಲದ ಜನರು ನಂಬುತ್ತಿದ್ದರು.
ಮಾನಸಿಕ ಹಾಗೂ ಭಾವನಾತ್ಮಕ ಶಾಂತಿಯನ್ನು ಚಿನ್ನ ನೀಡುತ್ತದೆ. ಚಿನ್ನವನ್ನು ಸದಾ ಧರಿಸುವುದ್ರಿಂದ ಒತ್ತಡ ಕಡಿಮೆಯಾಗುತ್ತದೆಯಂತೆ.
ನೈಸರ್ಗಿಕ ಖನಿಜಗಳು ಇದ್ರಲ್ಲಿರುವುದ್ರಿಂದ ಇದು ದೇಹದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ದೇಹಕ್ಕೆ ಹಾನಿಕಾರಕವಲ್ಲ. ಚಿನ್ನದ ಜೊತೆ ಬೇರೆ ಲೋಹ ಮಿಶ್ರವಾದ್ರೆ ಚಿನ್ನದ ಪ್ರಭಾವ ಕಡಿಮೆಯಾಗುತ್ತದೆ. ಹಾಗಾಗಿ ಚಿನ್ನದ ಜೊತೆ ಯಾವುದೇ ಬೇರೆ ವಸ್ತುಗಳನ್ನು ಇಡಬಾರದು.
ಚಿನ್ನ ಧರಿಸುವುದ್ರಿಂದ ರಕ್ತ ಪರಿಚಲನೆ ಸುಲಭವಾಗುತ್ತದೆ. ರೋಗಗಳನ್ನು ತಡೆಯಲು ಇದು ನೆರವಾಗುತ್ತದೆ.
ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ವಾತಾವರಣ ಬದಲಾದಂತೆ ನಮ್ಮ ದೇಹದಲ್ಲಾಗುವ ಬದಲಾವಣೆ ಹಾಗೂ ಖಾಯಿಲೆಯನ್ನು ಚಿನ್ನ ನಿಯಂತ್ರಿಸುತ್ತದೆ.
ಒತ್ತಡ, ಖಿನ್ನತೆ ಜೊತೆಗೆ ಸಂಧಿವಾತದ ರೋಗ ಲಕ್ಷಣವನ್ನು ಇದು ಕಡಿಮೆ ಮಾಡುತ್ತದೆ.