
ಅಲ್ಲದೇ, ದೇಶದಲ್ಲಿರುವ ಮದರಸಾಗಳು ಮತ್ತು ಬಾಂಬ್ ಸ್ಫೋಟಗಳ ನಡುವೆ ಸಂಬಂಧವನ್ನು ಕಲ್ಪಿಸಿರುವ ಅವರು, ಮದರಸಾಗಳು ಭಯೋತ್ಪಾದಕರ ತರಬೇತಿ ಕೇಂದ್ರಗಳಾಗಿ ಮಾರ್ಪಟ್ಟಿವೆ ಎಂದು ಹೇಳಿದ್ದಾರೆ.
ಕರೀಂ ನಗರದಲ್ಲಿ ಹಿಂದೂ ಏಕ್ತಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ರಾಮರಾಜ್ಯ ನಿರ್ಮಾಣವಾದರೆ ಖಂಡಿತವಾಗಿಯೂ ಉರ್ದು ಭಾಷೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ಮದರಸಾಗಳು ಭಯೋತ್ಪಾದಕರ ತರಬೇತಿ ಕೇಂದ್ರಗಳಾಗಿರುವುದರಿಂದ ದೇಶದಲ್ಲಿ ಬಾಂಬ್ ಸ್ಫೋಟ ಪ್ರಕರಣಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಇಂತಹ ಕೇಂದ್ರಗಳನ್ನು ನಾವು ಗುರುತಿಸಬೇಕಾಗಿದೆ ಎಂದರು.
ಗ್ಯಾನವ್ಯಾಪಿ ಮಸೀದಿ ವಿವಾದದ ಬಗ್ಗೆ ಪ್ರಸ್ತಾಪ ಮಾಡಿದ ಅವರು, ರಾಜ್ಯದಲ್ಲಿರುವ ಎಲ್ಲಾ ಮಸೀದಿಗಳನ್ನು ಅಗೆಯುತ್ತೇವೆ. ಅಲ್ಲಿ ಒಂದು ವೇಳೆ ಶಿವಲಿಂಗ ದೊರೆತರೆ ನಮಗೆ ಜಾಗವನ್ನು ಬಿಟ್ಟುಕೊಡುತ್ತೀರಾ ಎಂದು ಎಐಎಂಐಎಂ ಮುಖ್ಯಸ್ಥ ಓವೈಸಿಗೆ ಸವಾಲು ಹಾಕಿದರು.