ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಜ಼ಮ್ ಮತ್ತು ವಿಕೆಟ್‌ಕೀಪರ್ ಮೊಹಮ್ಮದ್ ರಿಜ಼್ವಾನ್ ಇತ್ತೀಚಿನ ದಿನಗಳಲ್ಲಿ ತೋರುತ್ತಿರುವ ಉತ್ತಮ ಪ್ರದರ್ಶನದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ಮಾಜಿ ನಾಯಕ ರಶಿದ್ ಲತೀಫ್, ಈ ವರ್ಷದ ಟಿ20 ಪಂದ್ಯಗಳಲ್ಲಿ ಇಬ್ಬರೂ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿರುವುದನ್ನು ಶ್ಲಾಘಿಸಿದ್ದಾರೆ.
2021ರ ಟಿ20 ಪಂದ್ಯಗಳಲ್ಲಿ ಅತ್ಯಂತ ಹೆಚ್ಚಿನ ರನ್ ಗಳಿಸಿರುವ ರಿಜ಼್ವಾನ್ 1,326 ರನ್ ಗಳಿಸಿದ್ದರೆ, ಎರಡನೇ ಸ್ಥಾನದಲ್ಲಿರುವ ಬಾಬರ್ 939 ರನ್ ಗಳಿಸಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇಬ್ಬರೂ ಆರಂಭಿಕರ ಅತ್ಯುತ್ತಮ ಜೊತೆಯಾಟಗಳ ಬಲದಿಂದ ಪಾಕ್ 2021ರ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪ್ರವೇಶಿಸಿತ್ತು.
BIG NEWS: MES ಪುಂಡಾಟದ ವಿರುದ್ಧ ಮತ್ತೆ ಸಿಡಿದೆದ್ದ ಕರವೇ ಕಾರ್ಯಕರ್ತರು; ಸುವರ್ಣ ಸೌಧಕ್ಕೆ ಮುತ್ತಿಗೆಗೆ ಸಜ್ಜು; ಬೆಳಗಾವಿಯಲ್ಲಿ ರಾರಾಜಿಸಿದ ಕನ್ನಡದ ಬಾವುಟ
“ಒಂದು ವರ್ಷದ ಹಿಂದೆ, ಪಾಕಿಸ್ತಾನದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅಥವಾ ಕೆಎಲ್ ರಾಹುಲ್‌ರಂಥ ಆಟಗಾರರು ಇಲ್ಲ ಎಂದು ನಾವು ಹೇಳುತ್ತಿದ್ದೆವು, ಅದರಲ್ಲೂ ಟಿ20 ಕ್ರಿಕೆಟ್‌ನಲ್ಲಿ. ಆದರೆ ನನಗೆ ಅನಿಸುತ್ತಿದೆ, ಕೆಲ ಕಾಲದ ಬಳಿಕ, ತಮ್ಮಲ್ಲಿ ರಿಜ಼್ವಾನ್ ಅಥವಾ ಬಾಬರ್ ಇಲ್ಲವೆಂದು ಭಾರತೀಯರು ಅನ್ನುತ್ತಾರೆ ಎಂದು,” ಎಂದು ಪಿಟಿವಿಗೆ ನೀಡಿದ ಸಂದರ್ಶನದಲ್ಲಿ ಲತೀಫ್ ಹೇಳಿದ್ದಾರೆ.
ಇಬ್ಬರೂ ಬ್ಯಾಟರ್‌ಗಳು ಟಿ20ಯಲ್ಲಿ ದೊಡ್ಡ ಇನಿಂಗ್ಸ್‌ಗಳನ್ನು ಕಟ್ಟುತ್ತಿದ್ದರೂ ಅವರ ಸ್ಟ್ರೈಕ್‌ರೇಟ್ ಕುರಿತು ಆಗಾಗ ಕೇಳಿ ಬರುವ ಮಾತುಗಳಿಗೆ ಉತ್ತರಿಸಿದ ಲತೀಫ್, “ಮುಂಚೆ ನಮಗೂ ಸಹ ಇಬ್ಬರ ಸ್ಕೋರಿಂಗ್ ರೇಟ್ ಬಗ್ಗೆ ಪ್ರಶ್ನೆಗಳಿದ್ದವು, ಆದರೆ ತಮ್ಮ ಇನಿಂಗ್ಸ್‌ಗಳನ್ನು ಪರಿಪೂರ್ಣವಾಗಿ ಮುಂದಕ್ಕೆ ಕೊಂಡೊಯ್ಯುವ ಮೂಲಕ ಅವರಿಬ್ಬರೂ ಇದನ್ನು ಸರಿದೂಗಿಸಿದ್ದಾರೆ,” ಎಂದಿದ್ದಾರೆ.