alex Certify ಪತ್ತೆ ಆಯ್ತು 380 ಮಿಲಿಯನ್ ವರ್ಷ ಹಳೆಯ ಮೀನಿನ ಹೃದಯದ ಪಳೆಯುಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ತೆ ಆಯ್ತು 380 ಮಿಲಿಯನ್ ವರ್ಷ ಹಳೆಯ ಮೀನಿನ ಹೃದಯದ ಪಳೆಯುಳಿಕೆ

ಸಮುದ್ರದ ಗರ್ಭದಾಳದಲ್ಲಿ ಅಂಕೆಶಂಕೆಗೂ ಮೀರಿರೋ ಜೀವಿಗಳಿವೆ. ಅದರಲ್ಲಿ ಕೆಲವೇ ಕೆಲವು ಮಾತ್ರ ನಮಗೆ ಗೊತ್ತಿರೋದು. ಇದರ ಬಗ್ಗೆ ಆಗಾಗ ಸಂಶೋಧನೆಗಳು ನಡೀತಾನೇ ಇರುತ್ತೆ. ಈ ರೀತಿಯ ಸಂಶೋಧನೆಯಿಂದಾನೇ ಸಮುದ್ರದಾಳದ ರಹಸ್ಯಮಯಿ ಜೀವಿಗಳು ಹೊರ ಜಗತ್ತಿನ ಮುಂದೆ ಬಯಲಾಗುತ್ತಲೇ ಇರುತ್ತೆ. ಈಗ ಆಸ್ಟ್ರೇಲಿಯಾ ಸಂಶೋಧನಾಕಾರರು ಮೀನಿನ ಹೃದಯದ ಪಳೆಯುಳಿಕೆಯನ್ನ ಕಂಡು ಹಿಡಿದಿದ್ದಾರೆ.

ಆ ಮೀನು ಅಂತಿಂಥ ಮೀನಲ್ಲ, ಸುಮಾರು 380 ಮಿಲಿಯನ್ ವರ್ಷ ಹಳೆಯ ಮೀನು. ಇದೇ ಮೀನಿನ ಹೃದಯದ ಪಳೆಯುಳಿಕೆಯನ್ನು ಕಂಡು ಹಿಡಿದಿದ್ದಾರೆ. ಆಸ್ಟ್ರೇಲಿಯಾದ ಕರ್ಟಿನ್ ವಿಶ್ವವಿದ್ಯಾಲಯದ ರೇಸಿಂಗ್ ಸಂಶೋಧಕರು ಮೀನಿನ ಹೃದಯವನ್ನು ಸುರಕ್ಷಿತವಾಗಿ ಸಂರಕ್ಷಿಸಿದ್ದಾರೆ.

ಈ ಪಳೆಯುಳಿಕೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಹೋದಾಗ ಇದು ಮಾನವರಿಗೆ ಇರುವಂತೆ ದವಡೆಯ ಕಶೇರುಕಗಳ ವಿಕಾಸದ ಬಗ್ಗೆ ಸುಳಿವುಗಳನ್ನು ನೀಡುತ್ತದೆ ಎಂದು CNET ಯ ವರದಿ ತಿಳಿಸಿದೆ. ಪಳೆಯುಳಿಕೆಯು ಹೊಟ್ಟೆ, ಕರುಳು ಮತ್ತು ಯಕೃತ್ತನ್ನು ಸಹ ಒಳಗೊಂಡಿದೆ, ಈ ಅಂಗಗಳು ಶಾರ್ಕ್ ಮೀನಿನ ಅಂಗರಚನಾ ಶಾಸ್ತ್ರವನ್ನು ಹೋಲುತ್ತವೆ.

CNET ವರದಿಯು, ಇಲ್ಲಿ ಸಿಕ್ಕಿರುವ ಹೃದಯದ ಪಳೆಯುಳಿಕೆಯನ್ನು ಗಮನಿಸಿದಾಗ ತಿಳಿಯುವ ಮಾಹಿತಿ ಎಂದ್ರೆ 358 ಮಿಲಿಯನ್ ವರ್ಷಗಳ ಹಿಂದೆ ಅಳಿವಿನಂಚಿನಲ್ಲಿರುವ ಆರ್ತ್ರೋಡೈರ್ ಕುಟುಂಬದ ಮೀನುಗಳ ಪಳೆಯುಳಿಕೆಗೆ ಇದು ಸೇರಿದೆ ಎಂದು ಹೇಳಿದೆ. ಆದರೆ ಈಗ ಸಿಕ್ಕಿರುವ ಮಾದರಿಯು ಪ್ರಸ್ತುತ ದಾಖಲೆ ಹೊಂದಿರುವ ಪಳೆಯುಳಿಕೆಗಿಂತ ಹಳೆಯದಾದ ಪಳೆಯುಳಿಕೆ ಆಗಿದೆ. ಅದರಲ್ಲಿ ಮುಖ್ಯವಾಗಿ ಮೀನಿನಲ್ಲಿರುವ ದವಡೆಯ ವಿಕಾಸವು ವಿಭಿನ್ನವಾಗಿದೆ.

“ಈ ಮೀನುಗಳು ಅಕ್ಷರಶಃ ತಮ್ಮ ಹೃದಯವನ್ನು ತಮ್ಮ ಬಾಯಿಯಲ್ಲಿ ಮತ್ತು ಕಿವಿರುಗಳ ಅಡಿಯಲ್ಲಿ ಹೊಂದಿವೆ. ಶಾರ್ಕ್ ಮೀನುಗಳು ಹೊಂದಿರುವ ಹಾಗೆಯೇ ಇದು ಕೂಡ ಅದೇ ಅಂಗರಚನೆಯನ್ನು ಹೊಂದಿದೆ” ಎಂದು ಪ್ರೋಪೆಸರ್ ಕೇಟ್ ಹೇಳಿದರು.ಇಂಡಿಪೆಂಡೆಂಟ್ ವೆಬ್ಸೈಟ್ನ ವರದಿಯ ಪ್ರಕಾರ, “ಪಶ್ಚಿಮ ಆಸ್ಟ್ರೇಲಿಯಾದ ಕಿಂಬರ್ಲಿ ಪ್ರದೇಶದಲ್ಲಿ ಗೊಗೊ ರಚನೆಯಲ್ಲಿ ಈ ಪಳೆಯುಳಿಕೆ ಕಂಡುಬಂದಿದೆ.

ಡೆವೊನಿಯನ್ ಅವಧಿಯ ಅಂತ್ಯದಿಂದ ಸಂರಕ್ಷಿಸಲ್ಪಟ್ಟ ವಿಶಿಷ್ಟ ಪ್ರಾಣಿ ಮತ್ತು ಸಸ್ಯವರ್ಗಕ್ಕೆ ಈ ಪ್ರದೇಶವು ಹೆಸರುವಾಸಿಯಾಗಿದೆ. ಈ ಅಧ್ಯಯನವು ನಿಜವಾಗಿಯೂ ಪ್ಯಾಲಿಯಂಟಾಲಜಿಸ್ಟ್ನ ಕನಸುಗಳ ವಿಷಯ” ಎಂದು ಫ್ಲಿಂಡರ್ಸ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಮತ್ತು ಅಧ್ಯಯನದ ಸಹ ಲೇಖಕ ಜಾನ್ ಲಾಂಗ್ ಈ ಆವಿಷ್ಕಾರವನ್ನು ವಿವರಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...