ಜಾತಿಯ ಸಂಕೋಲೆಗಳನ್ನೆಲ್ಲಾ ಮೀರಿ ಭಾರತೀಯರೆಲ್ಲ ಒಂದೇ ಡಿಎನ್‌ಎ ಹಂಚಿಕೊಂಡಿದ್ದಾರೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಕೊಟ್ಟಿದ್ದ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿದ ವಿಶ್ವ ಹಿಂದೂ ಪರಿಷದ್ (ವಿಎಚ್‌ಪಿ) ಸದಸ್ಯೆ ಸಾಧ್ವಿ ಪ್ರಾಚಿ, “ಗೋಮಾಂಸ ತಿನ್ನುವವರು ಹಿಂದೂಗಳಲ್ಲಿ ಕಂಡುಬರಲು ಸಾಧ್ಯವಿಲ್ಲ” ಎಂದಿದ್ದಾರೆ.
“ದೇಶವಾಸಿಗಳೆಲ್ಲಾ ಒಂದೇ ಡಿಎನ್‌ಎ ಹಂಚಿಕೊಂಡಿರಬಹುದು. ಆದರೆ ಗೋಮಾಂಸ ತಿನ್ನುವ ಮಂದಿಯ ಡಿಎನ್‌ಎ ನಮ್ಮಲ್ಲಿ ಎಂದಿಗೂ ಕಂಡು ಬರುವುದಿಲ್ಲ” ಎಂದು ಸಾಧ್ವಿ ಹೇಳಿದ್ದಾರೆ.
ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೊಟ್ ಪ್ರಮಾಣ ವಚನ
ಇದೇ ವೇಳೆ, ಜನಸಂಖ್ಯೆ ನಿಯಂತ್ರಣಕ್ಕೆ ಕಠಿಣ ಕಾನೂನನ್ನು ತರಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ ಸಾಧ್ವಿ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೆರುವ ಮಂದಿಯ ಮತದಾನದ ಹಕ್ಕನ್ನೇ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.
“ನಿಮಗೆ ಎಷ್ಟು ಮಡದಿಯರಿದ್ದಾರೆ ಎನ್ನುವುದು ಮುಖ್ಯವಲ್ಲ. ಆದರೆ ಮಕ್ಕಳು ಮಾತ್ರ ಎರಡೇ ಇರಲಿ” ಎಂದ ಸಾಧ್ವಿ, ’ಲವ್ ಜಿಹಾದ್’ ಕುರಿತು ಮಾತನಾಡಿ, “ಲವ್ ಜಿಹಾದ್ ಹೆಸರಿನಲ್ಲಿ, ಹುಡುಗಿಯರನ್ನು ಬಲೆಗೆ ಬೀಳಿಸಿ ಮತಾಂತರಗೊಳಿಸಲಾಗುತ್ತಿದೆ. ಮತ ರಾಜಕಾರಣ ಬಿಟ್ಟು ಹಿಂದೂ ಹೆಣ್ಣುಮಕ್ಕಳನ್ನು ಕಾಪಾಡುವುದನ್ನು ನೋಡಿ” ಎಂದು ಕಾಂಗ್ರೆಸ್ ನೇತೃತ್ವದ ರಾಜಸ್ಥಾನ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.