ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಪೊಲೀಸರ ತನಿಖೆ ವೇಳೆ ಆರೋಪಿ ನಾಶಿಪುಡಿ ನಾವು ಪಾಕ್ ಪರ ಘೋಷಣೆ ಕೂಗಿಲ್ಲ. ಫುಲ್ ಜೋಶ್ ನಲ್ಲಿ ಜಿಂದಾಬಾದ್ ಅಂದಿದ್ದು ನಿಜ, ಜಿಂದಾಬಾದ್ ಜಿಂದಾಬಾದ್ ಅಂತ ಜೈಕಾರ ಹಾಕಿದ್ವಿ, ಆದರೆ ಪಾಕ್ ಪರ ಘೋಷಣೆ ಕೂಗಿಲ್ಲ ಅಂತ ಹೇಳಿದ್ದಾನೆ.
ಯಾಕಾದ್ರೂ ಸನ್ಮಾನಿಸಲು ಬಂದ್ವೋ ಅನಿಸಿದೆ. ಸನ್ಮಾನ ಮಾಡಲು ಬಂದು ಜೈಲು ಸೇರುವ ಸ್ಥಿತಿ ಬಂತು ಎಂದು ಅಧಿಕಾರಿಗಳ ಬಳಿ ಆರೋಪಿ ನಾಶಿಪುಡಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.