
29 ವರ್ಷದ ಅಂಕಿತಾ ನಾಗರ್ ಜಡ್ಜ್ ನೇಮಕಾತಿ ಪರೀಕ್ಷೆಯಲ್ಲಿ ಮೂರು ಬಾರಿ ವಿಫಲವಾಗಿದ್ದರೂ, ನ್ಯಾಯಾಧೀಶರಾಗುವ ಗುರಿಯಿಂದ ವಿಚಲಿತಗೊಂಡಿರಲಿಲ್ಲ.
ನಾನು ನನ್ನ ನಾಲ್ಕನೇ ಪ್ರಯತ್ನದಲ್ಲಿ ಸಿವಿಲ್ ನ್ಯಾಯಾಧೀಶರ ಕ್ಲಾಸ್-II ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದೇನೆ. ಈ ಸಂತೋಷವನ್ನು ವ್ಯಕ್ತಪಡಿಸಲು ನನ್ನ ಬಳಿ ಪದಗಳಿಲ್ಲ ಎಂದು ಅಂಕಿತಾ ಹೇಳಿಕೊಂಡಿದ್ದಾರೆ.
ಅಂಕಿತಾ ತಂದೆ ಅಶೋಕ್ ನಗರ್ ಮುಸಖೇಡಿ ಪ್ರದೇಶದಲ್ಲಿ ತರಕಾರಿ ಮಾರಾಟಗಾರರಾಗಿದ್ದು, ಪರೀಕ್ಷೆಗೆ ಸಿದ್ಧತೆಗಳನ್ನು ಪೂರ್ಣಗೊಳಿಸಿದ ನಂತರ, ತಂದೆಯ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರಂತೆ.
ತನ್ನ ಸ್ನಾತಕೋತ್ತರ ಪದವಿ (ಎಲ್‌ಎಲ್‌ಎಂ) ಪೂರ್ಣಗೊಳಿಸಿದ ಅಂಕಿತಾ ಬಾಲ್ಯದ ಕನಸಾದ ನ್ಯಾಯಾಧೀಶರಾಗಲು ನಿರ್ಧರಿಸಿದ್ದರು. ಇದಕ್ಕಾಗಿ ತಯಾರಿ ನಡೆಸಿದರು.
ಮೂರು ವಿಫಲ ಪ್ರಯತ್ನಗಳ ಹೊರತಾಗಿಯೂ, ನಾನು ಹಿಂಜರಿಯಲಿಲ್ಲ. ನನ್ನ ಗುರಿಯನ್ನು ಸಾಧಿಸುವತ್ತ ಗಮನಹರಿಸಿದ್ದೆ. ಈ ಹೋರಾಟ ನನಗೆ ಬಾಗಿಲು ತೆರೆಯಿತು ಮತ್ತು ನಾನು ಮುಂದೆ ಸಾಗುತ್ತಿದ್ದೇನೆ ಎಂದು ಅಂಕಿತಾ ಹೇಳಿದ್ದಾರೆ.