ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 246 ಕ್ಕೆ ಏರಿಕೆಯಾಗಿದ್ದು, 192 ಜನ ನಾಪತ್ತೆಯಾಗಿದ್ದಾರೆ. 1592 ಜನರನ್ನು ರಕ್ಷಣೆ ಮಾಡಲಾಗಿದೆ.
8000ಕ್ಕೂ ಅಧಿಕ ಮಂದಿಯನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. 3322 ಪುರುಷರು, 3398 ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. 82 ನಿರಾಶ್ರಿತರ ಶಿಬಿರ ಚುರಲ್ ಮಲಾದಲ್ಲಿ ಎಂಟು ಕ್ಯಾಂಪ್ ಗಳನ್ನು ತೆರೆಯಲಾಗಿದೆ. ಕಾಳಜಿ ಕೇಂದ್ರದಲ್ಲಿ 1884 ಮಕ್ಕಳು, 23 ಗರ್ಭಿಣಿಯರು ಇದ್ದಾರೆ. ಗುಡ್ಡ ಕುಸಿತದ ಸಂತ್ರಸ್ತರಿಗೆ ಅಗತ್ಯ ಸಾಮಗ್ರಿಗಳ ವ್ಯವಸ್ಥೆ ಮಾಡಲಾಗಿದೆ.