alex Certify ದಟ್ಟ ಕಾಡಿನಲ್ಲಿ ನಿತ್ಯ 7 ಕಿ.ಮೀ. ಸಂಚರಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡ್ತಿದ್ದಾರೆ ಈ ಶಿಕ್ಷಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಟ್ಟ ಕಾಡಿನಲ್ಲಿ ನಿತ್ಯ 7 ಕಿ.ಮೀ. ಸಂಚರಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡ್ತಿದ್ದಾರೆ ಈ ಶಿಕ್ಷಕ..!

ಬುಡಕಟ್ಟು ಜನಾಂಗದವರು ಕಲಿಕೆಯಲ್ಲಿ, ಉದ್ಯೋಗದಲ್ಲಿ ಹಿಂದುಳಿದಿದ್ದರೂ ಸಹ ಅದರ ಬಗ್ಗೆ ತಲೆಕೆಡಿಸಿಕೊಳ್ಳುವವರು ಯಾರಿಲ್ಲ. ಆದರೆ ಸುಕುಮಾರನ್​ ಟಿಸಿ ಎಂಬ ಸಾಮಾನ್ಯ ವ್ಯಕ್ತಿ ಈ ಮಾತಿಗೆ ವಿರುದ್ಧವಾಗಿ ನಿಂತಿದ್ದಾರೆ.

ಬುಡಕಟ್ಟು ಜನಾಂಗದವರು ಇರುವ ಕಡೆ ಶಿಕ್ಷಕ ವೃತ್ತಿ ಮಾಡಲು ಅನೇಕರು ಹಿಂದೇಟು ಹಾಕುವ ಈ ಕಾಲದಲ್ಲಿ ಸುಕುಮಾರನ್​ ಮಾತ್ರ ಕಟ್ಟುನಾಯ್ಕರ್​​ ಸಮುದಾಯಕ್ಕೆ ಬರೋಬ್ಬರಿ 14 ವರ್ಷಗಳಿಂದ ಪಾಠ ಮಾಡ್ತಿದ್ದಾರೆ.

2001ರ ಜನವರಿ 1ನೇ ತಾರೀಖಿನಂದು ವಯಕುನಾಡಿನ ಚೆಕ್ಕಡಿಯ ಅರಣ್ಯ ಪ್ರದೇಶದ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳು ಪಾಠ ಕಲಿಸುವ ಜವಾಬ್ದಾರಿಯನ್ನ ಸುಕುಮಾರನ್​ಗೆ ನೀಡಲಾಯ್ತು. ಬುಡಕಟ್ಟು ವಸಾಹತು ಪ್ರದೇಶದಲ್ಲಿ ಏನೂ ಇಲ್ಲದ ಕಾರಣ ಇದನ್ನ ಶಾಲೆ ಎಂದು ಕರೆಯಲಾಗೋದಿಲ್ಲ.

ಕೇರಳದ ಡಿಪಿಇಪಿ ಯೋಜನೆಯಿಂದಾಗಿ ಬುಡಕಟ್ಟು ಜನಾಂಗಕ್ಕೂ ಶಿಕ್ಷಣ ಸಿಗುವಂತೆ ಮಾಡಿದೆ. ಹೊರಗಿನ ಸಮುದಾಯದೊಂದಿಗೆ ಯಾವುದೇ ಸಂದರ್ಭ ಹೊಂದಿಲ್ಲದ ಜನರು ಮೊದಲ ಬಾರಿಗೆ ಸುಕುಮಾರನ್​​ರನ್ನ ಭೇಟಿ ಮಾಡಿದ್ದರು. ಇಲ್ಲಿಂದ ಶುರುವಾದ ಬರೋಬ್ಬರಿ 14 ವರ್ಷಗಳ ಕಾಲ ಸಾಗಿದ್ದು ಪ್ರತಿದಿನ 7 ಕಿಲೋಮೀಟರ್ ದೂರ ದಟ್ಟ ಕಾಡಿನಲ್ಲಿ ನಡೆದುಕೊಂಡೇ ಸಾಗಿ ಪಾಠ ಮಾಡ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...