
ಕೇರಳದ ವಯನಾಡ್ ಭೂಕುಸಿತ ದುರಂತದಲ್ಲಿ ರಕ್ಷಣಾ ಕಾರ್ಯಾಚರಣೆಗೆ ವೇಗ ನೀಡಲು ಭಾರತೀಯ ಸೇನೆ ಕೇವಲ 16 ಗಂಟೆಯಲ್ಲಿ 190 ಅಡಿ ಉದ್ದದ ಸೇತುವೆ ನಿರ್ಮಿಸಿದೆ.
ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರ್ಸ್ ಗ್ರೂಪ್ ವಯನಾಡ್ ಭೂಕುಸಿತದ ನಡುವೆ ಪರಿಹಾರ ಕಾರ್ಯವನ್ನು ವೇಗಗೊಳಿಸಲು ಕೇವಲ 16 ಗಂಟೆಗಳಲ್ಲಿ 190 ಅಡಿ ಉದ್ದದ ಸೇತುವೆಯನ್ನು ನಿರ್ಮಿಸಿದೆ. ಇದು 24 ಟನ್ ಸಾಮರ್ಥ್ಯ ಹೊಂದಿದೆ. ವಯನಾಡಿನಲ್ಲಿ ಮೇಜರ್ ಸೀತಾ ಅವರ ಮೇಲ್ವಿಚಾರಣೆ ಅಡಿಯಲ್ಲಿ ನಿರ್ಮಿಸಲಾಗಿದೆ.
ವಯನಾಡ್‌ನಲ್ಲಿ ಭೂಕುಸಿತವು ತೀವ್ರವಾಗಿ ಪರಿಣಾಮ ಬೀರಿದೆ. ವಿವಿಧ ಪ್ರದೇಶಗಳಿಗೆ ಸಂಪರ್ಕವು ಸಂಪೂರ್ಣವಾಗಿ ಕಡಿತಗೊಂಡಿದೆ. ಆದ್ದರಿಂದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಮುಂದುವರಿಸಲು ಈ ಪ್ರದೇಶಗಳನ್ನು ತಲುಪುವ ಅವಶ್ಯಕತೆಯಿದೆ. ಮದ್ರಾಸ್ ಇಂಜಿನಿಯರ್ಸ್ ಗ್ರೂಪ್ ಜುಲೈ 31 ರಂದು ಸೇತುವೆಯನ್ನು ನಿರ್ಮಿಸಲು ಪ್ರಾರಂಭಿಸಿತು 16 ಗಂಟೆಗಳ ಒಳಗೆ ಅಂದರೆ, ಆಗಸ್ಟ್ 1 ರಂದು ಸಂಜೆ 5:30 ಕ್ಕೆ ಸೇತುವೆಯನ್ನು ಪೂರ್ಣಗೊಳಿಸಲಾಯಿತು.