
ಕಾಣೆಯಾದ ಬಹುತೇಕರು ಕಾಫಿ ಹಾಗೂ ಟೀ ಪ್ಲಾಂಟೇಶನ್ ಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಎನ್ನಲಾಗಿದ್ದು, ಕೆಲವೊಂದು ಪ್ರಕರಣಗಳಲ್ಲಿ ಸಂಪೂರ್ಣ ಕುಟುಂಬವೇ ನಾಪತ್ತೆಯಾಗಿದೆ. ಬಹುತೇಕ ಕೂಲಿ ಕಾರ್ಮಿಕರು ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಿಂದ ವಲಸೆ ಬಂದವರು ಎಂದು ಹೇಳಲಾಗಿದ್ದು, ವಾಸ್ತವ್ಯಕ್ಕಾಗಿ ತಮಗೆ ನೀಡಲಾಗಿದ್ದ ಕಾಟೇಜಿನಲ್ಲಿ ಮಲಗಿದ್ದರು. ಆದರೆ ಬೆಳಗ್ಗೆ ಕಣ್ತೆರೆಯುವ ಮುನ್ನವೇ ಪ್ರಕೃತಿಯ ರೌದ್ರ ನರ್ತನಕ್ಕೆ ಬಾರದ ಲೋಕ ಸೇರಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಭಾರಿ ಮಳೆ ಅಡ್ಡಿಯನ್ನುಂಟು ಮಾಡುತ್ತಿದ್ದು, ಮಂಗಳವಾರ ಬಹು ಹೊತ್ತಿನವರೆಗೂ ನಡೆದ ಕಾರ್ಯಾಚರಣೆ ಈಗಲೂ ಮುಂದುವರೆದಿದೆ.