ವಿಶ್ವದ ಅತ್ಯಂತ ಉದ್ದವಾದ ಮೂಗು ಹೊಂದಿರುವ ವ್ಯಕ್ತಿ ಥಾಮಸ್ ವಾಡ್‌ಹೌಸ್. ಈತನ ಪ್ರತಿಮೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ, ಇವರ ಮೇಣದ ಪ್ರತಿಮೆಯೊಂದು ನಿರ್ಮಾಣವಾಗಿದ್ದು, ಥಾಮಸ್ ಮತ್ತೆ ಮುನ್ನೆಲೆಗೆ ಬಂದಿದ್ದಾರೆ.
ಹಿಸ್ಟಾರಿಕ್ ವಿಡ್ಸ್ ಎಂಬ ಟ್ವಿಟರ್ ಪೇಜ್‍ನಲ್ಲಿ, ಬಿಲೀವ್ ಇಟ್ ಆರ್ ನಾಟ್ ಮ್ಯೂಸಿಯಂನಲ್ಲಿ ಇರಿಸಲಾಗಿರುವ ಇವರ ಮೇಣದ ಪ್ರತಿಮೆಯ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಥಾಮಸ್ ವಾಡ್‍ಹೌಸ್ ಅವರ ಮೂಗು 7.5 ಇಂಚು (19 ಸೆಂ.ಮೀ)ಉದ್ದವಿದೆ. ಈ ಮೂಲಕ ಇವರ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಕೂಡ ಮಾಡಿದ್ದಾರೆ.
18 ನೇ ಶತಮಾನದಲ್ಲಿದ್ದ ಥಾಮಸ್ ವಾಡ್‍ಹೌಸ್ ಓರ್ವ ಇಂಗ್ಲಿಷ್ ಸರ್ಕಸ್ ಕಲಾವಿದ. 18 ನೇ ಶತಮಾನದ ಮಧ್ಯಭಾಗದಲ್ಲಿ ವಿವಿಧ ಸರ್ಕಸ್ ಸೈಡ್‌ಶೋಗಳಲ್ಲಿ ಪ್ರದರ್ಶನ ನೀಡಿದರು. ಉದ್ದದ ಮೂಗನ್ನು ಹೊಂದುವ ಮೂಲಕ ವಿಶ್ವದಲ್ಲಿ ಅತೀ ಹೆಚ್ಚು ಜನಪ್ರಿಯರಾಗಿದ್ದರು. 1770ರ ದಶಕದಲ್ಲಿ ಇಂಗ್ಲೆಂಡ್‍ನಲ್ಲಿ ವಾಸಿಸುತ್ತಿದ್ದರು.
ಅವರ ವಿಚಿತ್ರವಾದ ದೈಹಿಕ ನೋಟವನ್ನು ಹೊರತುಪಡಿಸಿ, ವಾಡ್‌ಹೌಸ್ ಅವರ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಏನೂ ತಿಳಿದಿಲ್ಲ. ಆದರೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಅವರಿಗೆ ಮರಣೋತ್ತರವಾಗಿ ‘ವಿಶ್ವದ ಅತಿ ದೊಡ್ಡ ಮೂಗು’ ಎಂಬ ಬಿರುದನ್ನು ನೀಡಿತು. ಸರ್ಕಸ್ ಪ್ರದರ್ಶಕ ಅವರು 50 ಅಥವಾ 52 ವರ್ಷ ವಯಸ್ಸಿನವರಾಗಿದ್ದಾಗ ಯಾರ್ಕ್‌ಷೈರ್‌ನಲ್ಲಿ 1780 ರ ಸುಮಾರಿಗೆ ನಿಧನರಾದರು.