alex Certify ಕಣ್ಣಿನ ಆರೋಗ್ಯಕ್ಕೆ ಉತ್ತಮ ʼಕರ್ಬೂಜʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಿನ ಆರೋಗ್ಯಕ್ಕೆ ಉತ್ತಮ ʼಕರ್ಬೂಜʼ

ಕರ್ಬುಜ ಹಣ್ಣು ಅಷ್ಟೊಂದು ಸಿಹಿಕರ ಹಣ್ಣಲ್ಲ. ಆದರೆ ಅದರಲ್ಲಿರುವ ವಿಟಮಿನ್ ಎ ಶ್ವಾಸಕೋಶಗಳ ಆರೋಗ್ಯಕ್ಕೆ ಅತ್ಯುತ್ತಮವಾದ ಔಷಧಿ. ಆದ ಕಾರಣ ಪ್ರತಿ ದಿನ ಒಂದು ಬಟ್ಟಲು ಪ್ರಮಾಣದಲ್ಲಿ ಈ ಹಣ್ಣಿನ ಸೇವನೆ ಮಾಡಿದರೆ ದೇಹಕ್ಕೆ ಅಗತ್ಯವಾದ ವಿಟಮಿನ್ ಎ ದೊರಕುತ್ತದೆ.

ವಿಟಮಿನ್ ಎ ಹೇರಳವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ಇದು ಉತ್ತಮ. ಇದರಲ್ಲಿರುವ ಬೀಟಾ-ಕ್ಯಾರೋಟಿನ್ ರೆಟಿನಾ ನರವ್ಯೂಹಗಳ ಆರೋಗ್ಯಕ್ಕೆ ಹೆಚ್ಚು ಉಪಯುಕ್ತ. ಅಷ್ಟೇ ಅಲ್ಲದೇ.

* ಕರ್ಬೂಜ ಹಣ್ಣಿನಲ್ಲಿ ವಿಟಮಿನ್ ಸಿ ಪ್ರಮಾಣ ಸಹ ಹೆಚ್ಚಾಗಿಯೇ ಇದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

* ಈ ಹಣ್ಣಿನಲ್ಲಿರುವ ಪೊಟಾಶಿಯಂ ಬಿಪಿಯನ್ನು ಕಡಿಮೆ ಮಾಡುತ್ತದೆ. ಸದಾ ಸ್ನಾಯುಗಳು ಹಿಡಿದಂತಾಗುವ ಸಮಸ್ಯೆ ಎದುರಿಸುತ್ತಿರುವವರು ಈ ಹಣ್ಣನ್ನು ಸೇವಿಸಬಹುದು.

* ಈ ಹಣ್ಣಿನ ರಸ ಸೇವಿಸಿದರೆ ಆಮ್ಲಜನಕದ ಸರಬರಾಜು ಮೆದುಳಿಗೆ ಸುಗಮವಾಗಿ ಸಾಗುತ್ತದೆ. ಇದರಿಂದ ಒತ್ತಡ ಕಡಿಮೆಯಾಗುತ್ತದೆ. ಜೊತೆಗೆ ಸುಖನಿದ್ರೆಯನ್ನು ಹೊಂದಬಹುದು.

* ಇದರಲ್ಲಿರುವ ಬೀಜವನ್ನು ತಿಂದರೆ ಹೊಟ್ಟೆ ಶುಭ್ರಗೊಳ್ಳುತ್ತದೆ. ಕೆಮ್ಮು, ಜ್ವರ, ಅಜೀರ್ಣ ತೊಂದರೆಗಳನ್ನು ಎದುರಿಸುತ್ತಿರುವವರಿಗೆ ಇದು ಅತ್ಯುತ್ತಮ ಪರಿಹಾರ ನೀಡುತ್ತದೆ.

* ಇದರಲ್ಲಿರುವ ಫೋಲಿಕ್ ಆಮ್ಲವು ಗರ್ಭಿಣಿಯರ ಆರೋಗ್ಯವನ್ನು ಕಾಪಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...