alex Certify ಬೇಸಿಗೆಯಲ್ಲಿ ಸೇವಿಸಲೇಬೇಕಾದ ಹಣ್ಣು ಕರ್ಬೂಜ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ಸೇವಿಸಲೇಬೇಕಾದ ಹಣ್ಣು ಕರ್ಬೂಜ

ಬೇಸಿಗೆಯಲ್ಲಿ ಸೇವಿಸಲೇಬೇಕಾದ ಹಣ್ಣು ಅಂದರೆ ಅದು ಕರ್ಬೂಜ. ಕರ್ಬೂಜ ಹಣ್ಣು ದೇಹವನ್ನು ತಂಪಾಗಿಸುತ್ತದೆ, ಬಾಯಾರಿಕೆ ನೀಗಿಸುತ್ತದೆ, ಆಯಾಸ ಪರಿಹರಿಸುತ್ತದೆ ಅನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಈ ಹಣ್ಣಿನಿಂದ ಚರ್ಮದ ರಕ್ಷಣೆ ಮಾಡಿಕೊಳ್ಳಬಹುದು. ಚರ್ಮದ ಹಲವು ಸಮಸ್ಯೆಗಳಿಗೆ ಕರ್ಬೂಜ ಹಣ್ಣಿನಿಂದ ಹೇಗೆ ಪರಿಹಾರ ಕಂಡುಕೊಳ್ಳಬಹುದು ಅಂತ ತಿಳಿಯಿರಿ.

* ಕಾಲು ಕಪ್ ಕರ್ಬೂಜ ಹಣ್ಣಿನ ತಿರುಳು ಹಾಗೂ ಹಾಲಿನ ಕೆನೆಗೆ ಚಿಟಿಕೆ ಅರಿಶಿಣ ಸೇರಿಸಿ ಮುಖಕ್ಕೆ ಲೇಪಿಸಿಕೊಂಡು ಅರ್ಧ ಗಂಟೆ ನಂತರ ತೊಳೆದರೆ ಚರ್ಮ ಕಾಂತಿಯುತವಾಗುತ್ತದೆ.

* ಕರ್ಬೂಜ ಹಣ್ಣಿನ ತಿರುಳಿಗೆ ಎಳನೀರು ಸೇರಿಸಿ ಕುತ್ತಿಗೆ, ಕೈ, ಕಾಲುಗಳಿಗೆ ಮಸಾಜ್ ಮಾಡಿಕೊಂಡು ಅರ್ಧ ಗಂಟೆಯ ನಂತರ ಶುಚಿಗೊಳಿಸಿಕೊಂಡರೆ ಒಣ ಚರ್ಮ ಮೆರಗು ಪಡೆದುಕೊಳ್ಳುತ್ತದೆ.

* ಕರ್ಬೂಜ ಹಣ್ಣಿನ ಬೀಜಗಳನ್ನು ನೀರಿನಲ್ಲಿ ಕುದಿಸಿ, ತಣಿಸಿ, ಶೋಧಿಸಿ ಕುಡಿದರೆ ಚರ್ಮದ ಸಮಸ್ಯೆಗಳು ನಿವಾರಣೆಯಾಗುತ್ತದೆ.

* ತಲಾ ಕಾಲು ಕಪ್ ಕರ್ಬೂಜ ಹಣ್ಣಿನ ತಿರುಳು, ಬಾಳೆಹಣ್ಣು ಹಾಗೂ ಪಪ್ಪಾಯ ಹಣ್ಣಿನ ತಿರುಳುಗಳನ್ನು ಸಮ ಪ್ರಮಾಣದಲ್ಲಿ ಸೇರಿಸಿ ಮುಖಕ್ಕೆ ಲೇಪಿಸಿದರೆ ಕಪ್ಪು ಕಲೆಗಳು ದೂರವಾಗುತ್ತವೆ.

* ದಿನಕ್ಕೆರಡು ಬಾರಿ ಕರ್ಬೂಜ ರಸವನ್ನು ನಿಯಮಿತವಾಗಿ ಕುಡಿಯುವುದರಿಂದ ಕಜ್ಜಿ, ಗಜಕರ್ಣ ಮುಂತಾದ ಚರ್ಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...