ಬೆಂಗಳೂರು: ಬೆಂಗಳೂರಿನಲ್ಲಿ ವಾಟರ್ ಟ್ಯಾಂಕ್ ಬಿದ್ದು ದುರಂತ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
4 ಅಂತಸ್ತಿನ ಕಟ್ಟಡದ ಮೇಲಿನಿಂದ ವಾಟರ್ ಟ್ಯಾಂಕ್ ಬಿದ್ದು ದುರಂತ ಸಂಭವಿಸಿದ ಘಟನೆ ಶಿವಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. ಅರುಳ್ (40) ಹಾಗೂ ಗ್ರಾಹಕ ಕೋಟಾ ನಾಗೇಶ್ವರ ರಾವ್ (32) ಎಂಬ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಗಂಭೀರವಾಗಿ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಕಮಲ್ ಥಾಪ ಎಂಬುವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಎಗ್ ರೈಸ್ ಅಂಗಡಿ ಮಾಲೀಕ ಮತ್ತು ಎಗ್ ರೈಸ್ ತಿನ್ನುತ್ತಿದ್ದ ಗ್ರಾಹಕ ನಿನ್ನೆ ಮೃತಪಟ್ಟಿದ್ದರು. 4 ಅಂತಸ್ತಿನ ಕಟ್ಟಡದ ಮೇಲಿನಿಂದ ವಾಟರ್ ಟ್ಯಾಂಕ್ ಬಿದ್ದು ದುರಂತ ಸಂಭವಿಸಿದೆ. ಶಿವಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಓವರ್ ಟ್ಯಾಂಕ್ ಅವೈಜ್ಞಾನಿಕವಾಗಿ ನಿರ್ಮಿಸಿರುವುದು ಘಟನೆಗೆ ಕಾರಣ ಎನ್ನಲಾಗಿದೆ.